×
Ad

'ಮತದಾನಕ್ಕೆ ಅಡ್ಡಿಪಡಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ'

Update: 2018-05-11 21:41 IST

ಬಂಟ್ವಾಳ, ಮೇ 11: ಮತದಾನಕ್ಕೆ ಅಡ್ಡಿಪಡಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ದ.ಕ.ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ರವಿಕಾಂತೇಗೌಡ ಪತ್ರಕರ್ತರ ಭೇಟಿ ಸಂದರ್ಭದಲ್ಲಿ ತಿಳಿಸಿದ್ದಾರೆ.

ಬಂಟ್ವಾಳ 205 ವಿಧಾನ ಸಭಾ ಕ್ಷೇತ್ರದಲ್ಲಿ ಮುಕ್ತ ನಿರ್ಭೀತ ಶಾಂತಿಯುತ ಮತದಾನಕ್ಕಾಗಿ ಸೂಕ್ತ ಬಂದೋಬಸ್ತು ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವಿಶೇಷ ಗಸ್ತುನಲಿದ್ದು, ಜಿಲ್ಲೆಯ ಅತೀ ಸೂಕ್ಷ್ಮ  ಕ್ಷೇತ್ರಗಳೊಂದಾದ ಬಂಟ್ವಾಳದ ಭದ್ರತೆಗಾಗಿ ಒಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ನಾಲ್ಕು ಇನ್‌ಸ್ಪೆಕ್ಟರ್ ಹಾಗೂ ಎಲ್ಲ ಬೂತ್‌ಗಳಿಗೆ ಬಂದೋಬಸ್ತು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಚುನಾವಣೆ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಮೆರವಣಿಗೆ, ಗುಂಪು ಸೇರುವುದು ಕಾನೂನು ಬಾಹಿರವಾಗಿ ವರ್ತಿಸಿದರೆ ಕಾನೂನು ಕ್ರಮ ಜರಗಿಸ ಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News