×
Ad

ಮೇ 19: ಉದಯಕುಮಾರ್ ಹಬ್ಬು ಪುಸ್ತಕ ಬಿಡುಗಡೆ

Update: 2018-05-11 22:02 IST

ಉಡುಪಿ, ಮೇ 11: ಅನಂತ ಪ್ರತಿಭಾ ಪ್ರಕಾಶನ ಕಿನ್ನಿಗೋಳಿ ಮತ್ತು ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಇವರ ಸಹಯೋಗದಲ್ಲಿ ಉದಯ ಕುಮಾರ್ ಹಬ್ಬು ಅವರ ಎರಡು ಪುಸ್ತಕಗಳ (ಪ್ರಾಚೀನ ಭಾರತದ ತತ್ವದರ್ಶನಗಳು ಮತ್ತು ಮಕ್ಕಳ ಕಾದಂಬರಿಯ ಅನುವಾದ ‘ಲುಂಡೀರಿಯ’) ಬಿಡುಗಡೆ ಕಾರ್ಯಕ್ರಮ ಮೇ 19ರ ಶನಿವಾರ ಬೆಳಗ್ಗೆ 10:00 ಕ್ಕೆ ನಡೆಯಲಿದೆ.

ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕ (ಆರ್‌ಆರ್‌ಸಿ) ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕ ಅರವಿಂದ ಚೊಕ್ಕಾಡಿ ಮತ್ತು ಸುರೇಂದ್ರ ಅಡಿಗ ಭಾಗವಹಿಸಲಿದ್ದಾರೆ. ಡಾ.ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸುವರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ್ ಹಿರೇಗಂಗೆ ಹಾಗೂ ಮಂಗಳೂರು ಆಕೃತಿ ಪ್ರಿಂಟ್ಸ್‌ನ ಮಾಲಕ ಕಲ್ಲೂರು ನಾಗೇಶ್ ಉಪಸ್ಥಿತ ರಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News