ಬಿವಿಟಿಯಲ್ಲಿ ಕೈತೋಟ, ತರಕಾರಿ ಕೃಷಿಯ ಬಗ್ಗೆ ಮಾಹಿತಿ ಶಿಬಿರ
ಮಣಿಪಾಲ, ಮೇ 11: ಭಾರತೀಯ ವಿಕಾಸ ಟ್ರಸ್ಟ್ ಇದೇ ಮೇ 22ರ ಮಂಗಳವಾರ ಬೆಳಗ್ಗೆ 9:30ರಿಂದ ತರಕಾರಿ ಕೃಷಿಯ ಬಗ್ಗೆ ಒಂದು ದಿನದ ಮಾಹಿತಿ ಶಿಬಿರವನ್ನು ಹಮ್ಮಿಕೊಂಡಿದೆ.
ಮನೆಯ ಕೈತೋಟದಲ್ಲಿ ತರಕಾರಿ ಬೆಳೆಯುವುದರಿಂದ ತಾಜಾ ತರಕಾರಿ ಲ್ಯವಾಗುವುದಲ್ಲದೇ, ಹೆಚ್ಚುವರಿ ತರಕಾರಿಯನ್ನು ಮಾರಾಟ ಮಾಡಿ ಸೂಕ್ತ ಆದಾಯ ಗಳಿಸಲೂ ಅವಕಾಶಗಳಿವೆ.
ಈ ಮಾಹಿತಿ ಶಿಬಿರದಲ್ಲಿ ಮನೆಯಂಗಳ ಅಥವಾ ತಾರಸಿ ಮೇಲೆ ಸುಲಭ ವಾಗಿ ತರಕಾರಿ ಕೈತೋಟ ಮಾಡಲು ಇಲ್ಲಿಯ ಪರಿಸರಕ್ಕೆ ಸೂಕ್ತವಾದ ತರಕಾರಿ ಗಿಡಗಳ ಆಯ್ಕೆ, ಕಂಪೋಸ್ಟ್ ಗೊಬ್ಬರ ತಯಾರಿ, ಸುಲಭ ರೀತಿಯಲ್ಲಿ ರೋಗ ನಿವಾರಣೆ ಇತ್ಯಾದಿ ವಿಷಯಗಳ ಬಗ್ಗೆ ಕೃಷಿ ವಿಜ್ಞಾನಿ ವೈಕುಂಠ ಹೇರ್ಳೆ, ಕೆವಿಕೆ ಯ ಕೃಷಿ ತಜ್ಞರಾದ ಡಾ. ಧನಂಜಯ ಮತ್ತು ಡಾ.ಚೈತನ್ಯ ಇವರು ಮಾಹಿತಿ ನೀಡುವರು. ತರಬೇತಿ ಕೊನೆಯಲ್ಲಿ ತರಕಾರಿ ಬೀಜಗಳನ್ನು ವಿತರಿಸಲಾಗುತ್ತದೆ.
ಈ ತರಬೇತಿಯಲ್ಲಿ ಎಲ್ಲ ವಯೋಮಿತಿಯ ಆಸಕ್ತ ಪುರುಷರು, ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದು. ಆಸಕ್ತರು ತಮ್ಮ ಭಾಗವಹಿಸುವಿಕೆಯನ್ನು ಭಾರತೀಯ ವಿಕಾಸ ಟ್ರಸ್‌ಟ್, ಅನಂತ, ಮಣಿಪಾಲ ಅಂಬಾಗಿಲು ರಸ್ತೆ, ಕುಂಜಿಬೆಟ್ಟು, ಅಂಚೆ ಉಡುಪಿ-576102, (ದೂರವಾಣಿ:0820-2570263) ಇಲ್ಲಿ ಮೇ 19ರೊಳಗೆ ದೃಢೀಕರಿಸ ಬಹುು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.