×
Ad

​ಟೆಂಪೊ ಟ್ರಾವೆಲ್ಲರ್ ಪಲ್ಟಿ: 19 ಮಂದಿಗೆ ಗಾಯ

Update: 2018-05-11 22:36 IST

ಕೊಲ್ಲೂರು, ಮೇ 11: ಟೆಂಪೋ ಟ್ರಾವೆಲ್ಲರೊಂದು ಹಾಲಕಲ್ ಬಳಿ ಗುರುವಾರ ಸಂಜೆ 6ಗಂಟೆ ಸುಮಾರಿಗೆ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಹೊಂಡಕ್ಕೆ ಪಲ್ಟಿಯಾದ ಪರಿಣಾಮ 19 ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಈ ಅಪಘಾತದಲ್ಲಿ ಟ್ರಾವೆಲ್ಲರ್‌ನಲ್ಲಿದ್ದ ಬೆಂಗಳೂರು ವರ್ತೂರು ಸಮೀಪದ ಸರ್ಜಿಪುರದ ಅನಂತ, ವರ್ಷ, ಅಕ್ಷತ, ರೇಣುಕ, ಮಂಜುಳ, ಆದರ್ಶ, ಮಹೇಶ್, ರವಿ, ಪದ್ಮ, ಯೋಗೀಶ್, ಗಂಗಮ್ಮ, ಸರೋಜಮ್ಮ, ಪವನ, ಅಂಬಿಕ, ನಿರ್ಮಲ, ಶಿವಶಂಕರ, ಪಂಕಜ, ಭಾನುಪ್ರಿಯ ಹಾಗೂ ಚಾಲಕ ಪ್ರತಾಪ್ ಎಂಬವರು ಗಾಯಗೊಂಡಿದ್ದಾರೆ.

ಇವರೆಲ್ಲರು ಕೊಲ್ಲೂರು ಮೂಕಾಂಬಿಕ ದೇವರ ದರ್ಶನಕ್ಕೆ ಟೆಂಪೋ ಟ್ರಾವೆಲ್ಲರ್‌ನಲ್ಲಿ ಬೆಂಗಳೂರಿನಿಂದ ಹೊರಟಿದ್ದು, ಕೊಲ್ಲೂರಿಗೆ ಹೋಗುತ್ತಿದ್ದ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು 15 ಅಡಿ ಆಳದ ಹೊಂಡಕ್ಕೆ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ವಿದ್ಯುತ್ ಕಂಬ ತುಂಡಾಗಿ ಮೆಸ್ಕಾಂ ಇಲಾಖೆಗೆ ನಷ್ಟ ಉಂಟಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News