×
Ad

ಕೋಲ್ಕತಾ ನೈಟ್ ರೈಡರ್ಸ್ 245/6

Update: 2018-05-12 18:07 IST
ನರೇನ್ 75 ರನ್(36, 9ಬೌ,4ಸಿ) 

ಇಂದೋರ್, ಮೇ 12: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಐಪಿಎಲ್‌ನ 44ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 245 ರನ್ ಗಳಿಸಿದೆ.

 ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ದಾಂಡಿಗ ಸುನೀಲ್ ನರೇನ್ ಮತ್ತು ನಾಯಕ ದಿನೇಶ್ ಕಾರ್ತಿಕ್ ಅರ್ಧಶತಕ ದಾಖಲಿಸಿ ತಂಡಕ್ಕೆ ದೊಡ್ಡ ಸ್ಕೋರ್ ದಾಖಲಿಸಲು ನೆರವಾದರು.

ನರೇನ್ 75 ರನ್(36, 9ಬೌ,4ಸಿ) ಮತ್ತು ಕಾರ್ತಿಕ್ 50 ರನ್(23ಎ, 5ಬೌ,3ಸಿ) ಗಳಿಸಿದರು.

ಕ್ರಿಸ್ ಲಿನ್ (27), ರಾಬಿನ್ ಉತ್ತಪ್ಪ (24), ಆ್ಯಂಡ್ರೆ ರಸೆಲ್(31), ನಿತೀಶ್ ರಾಣಾ(11), ಶುಭ್‌ಮನ್ ಗಿಲ್ (ಔಟಾಗದೆ 16) ಎರಡಂಕೆಯ ಸ್ಕೋರ್ ದಾಖಲಿಸಿದರು. ಜಾವ್ಸನ್ ಸೆಯರ್ಲೆಸ್ ಔಟಾಗದೆ 6 ರನ್ ಗಳಿಸಿದರು.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆ್ಯಂಡ್ರೊ ಟೈ 41ಕ್ಕೆ 4 , ಬರೀಂದರ್ ಸರಣ್ , ಮೋಹಿತ್ ಶರ್ಮಾ ತಲಾ 1 ವಿಕೆಟ್ ಪಡೆದರು.

ಟಾಸ್ ಜಯಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು.

 ಸಂಕ್ಷಿಪ್ತ ಸ್ಕೋರ್ ವಿವರ

ಕೋಲ್ಕತಾ ನೈಟ್ ರೈಡರ್ಸ್‌ 20 ಓವರ್‌ಗಳಲ್ಲಿ 245/6( ಸುನೀಲ್ ನರೇನ್ 75, ದಿನೇಶ್ ಕಾರ್ತಿಕ್ 50, ರಸೆಲ್ 31; ಟೈ 41ಕ್ಕೆ 4).
,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News