×
Ad

ಪುತ್ತೂರು ಶಾಂತಿಯುತ ಮತದಾನ

Update: 2018-05-12 19:11 IST

ಪುತ್ತೂರು,ಮೇ.12: ತಾಲೂಕಿನಲ್ಲಿ ಬೆಳಗ್ಗಿನ ವೇಳೆಯಲ್ಲಿ ಚುರುಕಿನ ಮತದಾನವಾಗಿದ್ದು, ಮದ್ಯಾಹ್ನದ 1 ಗಂಟೆ ವೇಳೆಗೆ ತಾಲೂಕಿನಲ್ಲಿ ಸುಮಾರು ಶೇ. 50ರಷ್ಟು ಮತದಾನವಾಗಿತ್ತು, ಮದ್ಯಾಹ್ನದ ಬಳಿಕ ಮಂದಗತಿಯಲ್ಲಿ ಮತದಾನವಾಯಿತು. 

ಶುಕ್ರವಾರ ರಾತ್ರಿ ಬಾರಿ ಮಳೆಯಾದ ಕಾರಣ ತಾಲೂಕಿನ ಬಹುತೇಕ ಕೇಂದ್ರಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಸ್ಥಗಿತಗೊಂಡಿತ್ತು. ಚುನಾವಣಾ ಕರ್ತವ್ಯಕ್ಕಾಗಿ ಆಗಮಿಸಿದ ಸಿಬ್ಬಂದಿಗಳು ರಾತ್ರಿ ಪರದಾಡುವಂತಾಯಿತು. ವಿದ್ಯುತ್ ಸ್ಥಗಿತಗೊಂಡ ಕಾರಣ ಹಾಗೂ ಸೊಳ್ಳೆ ಕಡಿತದಿಂದಾಗಿ ರಾತ್ರಿ ನಮಗೆ ನಿದ್ದೆಯಿಲ್ಲ ಎಂದು ಸಿಬ್ಬಂದಿಗಳು ಮಾದ್ಯಮದ ಮುಂದೆ ಹೇಳಿಕೊಂಡರು. 

ಮತದಾನ ಕೇಂದ್ರದಿಂದ 100 ಮೀಟರ್ ಒಳಭಾಗದಲ್ಲಿದೆ ಎಂಬ ಕಾರಣಕ್ಕಾಗಿ ಕಲ್ಪಣೆ ಪ್ರೌಢಶಾಲೆಯಲ್ಲಿನ ಭಾಗ ಸಂಖ್ಯೆ 189ರಲ್ಲಿನ ಪಕ್ಕದಲ್ಲಿದ್ದ ಅಂಗಡಿಯನ್ನು ಪೊಲೀಸರು ಮುಚ್ಚಿಸಿದರು. 

ಮತದಾನ ಕೇಂದ್ರದ ಬಳಿಯಲ್ಲಿಯೇ ಈ ಅಂಗಡಿಯಿದ್ದು, ಎಂದಿನಂತೆ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದರು. ಅನೇಕ ಮಂದಿ ಈ ಅಂಗಡಿಯಲಿ ಕುಳಿತಿದ್ದರು. ಇದನ್ನು ಗಮನಿಸಿದ ಪೊಲೀಸರು ಮತಗಟ್ಟೆಯ ಸಮೀಪದಲ್ಲಿರುವ ಈ ಅಂಗಡಿಯನ್ನು ಮುಚ್ಚಿಸಿ ಅಲ್ಲಿ ಕುಳಿತಿದ್ದವರನ್ನು ತೆರಳುವಂತೆ ಸೂಚನೆ ನೀಡಿದರು. 

ಪಾಣಾಜೆ ಮತಗಟ್ಟೆಯಲ್ಲಿ 106 ವರ್ಷದ ಮಮ್ಮುಂಜಿ ಪಳ್ಳಿತ್ತಡ್ಕ ಅವರು ಇತರರ ಸಹಾಯದೊಂದಿಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಬೆಳಂದೂರು ಮತಗಟ್ಟೆಯಲ್ಲಿ ಶತಾಯುಷಿ ಶಾಂತಮ್ಮ ಅವರು ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು. .
ದೂಮಡ್ಕ ಹಿ.ಪ್ರಾ. ಶಾಲಾ ಮತಗಟ್ಟೆಯಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದಂತೆ ನಾಲ್ವರ ಹೆಸರು, ಆರ್ಯಾಪು ಗ್ರಾಮದ ಕುಂಜೂರು ಪಂಜ ಮತಗಟ್ಟೆಯಲ್ಲಿ ಮೂವರು ಮಹಿಳೆಯರ ಹೆಸರು ನಾಪತ್ತೆಯಾಗಿದ್ದು, ಅವರು ಮತದಾನದಿಂದ ಅವಕಾಶ ವಂಚಿತರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News