ಪುತ್ತೂರು : ಆರಂಭದಲ್ಲೇ ಕೆಟ್ಟ ಮತಯಂತ್ರ
Update: 2018-05-12 19:29 IST
ಪುತ್ತೂರು,ಮೇ.12 : ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನೆಟ್ಟಣಿಗೆ ಮುಡ್ನೂರು ಗ್ರಾಮದ ನೂಜಿಬೈಲು ಮತದಾನ ಕೇಂದ್ರದಲ್ಲಿ ಮತದಾನ ಆರಂಭಕ್ಕೆ ಮುನ್ನ ನಡೆದ ಪರಿಶೀಲನಾ ಮತ ಚಲಾವಣೆಯ ಪ್ರಕ್ರಿಯೆಯ ವೇಳೆಯೇ ಮತಯಂತ್ರ ಕೆಟ್ಟು ಹೋದ ಘಟನೆ ನಡೆಯಿತು.
ಮತಯಂತ್ರ ಕೆಟ್ಟ ಸಂದರ್ಭದಲ್ಲಿ ಅದೇ ಪ್ರದೇಶ ವ್ಯಾಪ್ತಿಯಲ್ಲಿದ್ದ ಸೆಕ್ಟರ್ ಆಫೀಸರ್ ಅವರ ಬಳಿಯಿದ್ದ ಮತಯಂತ್ರವನ್ನು ಪಡೆದು ಬದಲಿ ವ್ಯವಸ್ಥೆ ಮಾಡುವ ಮೂಲಕ ಸಮಯಕ್ಕೆ ಸರಿಯಾಗಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.
ಬೆಟ್ಟಂಪಾಡಿ, ಮಿತ್ತಡ್ಕ ಮೊದಲಾದ ಮತಗಟ್ಟೆಗಳಲ್ಲಿನ ಮತ ಯಂತ್ರ ಕೆಟ್ಟು ಹೋದ ಪರಿಣಾಮವಾಗಿ ಮತದಾನ ಆರಂಭದಲ್ಲಿ ಸ್ವಲ್ಪ ವಿಳಂಬವಾಯಿತೆಂದು ತಿಳಿದು ಬಂದಿದೆ.