×
Ad

ಪುತ್ತೂರು: 90 ವರ್ಷದ ಮಾಧವ ಪಡಿಯಾರ್ ಮತದಾನ

Update: 2018-05-12 19:31 IST

ಪುತ್ತೂರು,ಮೇ.12: ಅನಾರೋಗ್ಯದಿಂದ ಬಳಲುತ್ತಿರುವ ಇಳಿವಯಸ್ಸಿನ ವೃದ್ದ ಮಾಧವ ಪಡಿಯಾರ್ ಅವರನ್ನು ನೆಲ್ಲಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಆ್ಯಂಬುಲೆನ್ಸ್‍ನಲ್ಲಿ ಕರೆತಂದು ಮತದಾನ ಮಾಡಿಸಲಾಯಿತು.

90 ವರ್ಷ ಪ್ರಾಯದವರಾದ ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಮಾಧವ ಪಡಿಯಾರ್ ಅವರು ವಯೋಸಹಜವಾಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಮಲಗಿದ ಸ್ಥಿತಿಯಲ್ಲಿರುವ ಅವರನ್ನು ಮತದಾನ ಕೇಂದ್ರದ ಬಳಿಗೆ ಆ್ಯಂಬುಲೆನ್ಸ್‍ನಲ್ಲಿ ಕರೆತಂದು, ಮತಗಟ್ಟೆಯೊಳಗೆ ಎತ್ತಿಕೊಂಡು ಹೋಗಿ ಮತದಾನ ಮಾಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News