ಬಿಸಿಎಫ್ ವಿದ್ಯಾರ್ಥಿವೇತನ: ವಿದ್ಯಾರ್ಥಿಗಳಿಗೆ ಸೂಚನೆ
Update: 2018-05-12 21:53 IST
ಮಂಗಳೂರು, ಮೇ 12: ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ನೀಡಲ್ಪಡುವ 2018 ರ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿ 'ವಾರ್ತಾ ಭಾರತಿ' ದೈನಿಕದಲ್ಲಿ ಜಾಹೀರಾತು ಹಾಕಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಸದ್ರಿ ಜಾಹಿರಾತಿನಲ್ಲಿ ನಮೂದಿಸಿರುವ ಬಿಸಿಎಫ್ ವತಿಯಿಂದ ಅಧಿಕೃತವಾಗಿ ನೇಮಕ ಗೊಂಡ ಕಲೆಕ್ಷನ್ ಸೆಂಟರ್ ಗಳಲ್ಲಿ ಮತ್ತು ಇಮೇಲ್ ವಿಳಾಸಗಳಿಗೆ ಮಾತ್ರ ಅರ್ಜಿ ಸಲ್ಲಿಸ ಬಹುದಾಗಿದೆ. ಇದರ ಹೊರತಾಗಿ ಬೇರೆ ಯಾವುದೇ ಸಂಘ, ಸಂಸ್ಥೆ, ಸೈಬರ್ ಕೆಫೆ ಅಥವಾ ವ್ಯಕ್ತಿಗಳ ಮೂಲಕ ಬಂದ ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಬಿಸಿಎಫ್ ಪರಿಗಣಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಬಿಸಿಎಫ್ ಅಧ್ಯಕ್ಷರ ಮತ್ತು ಸದಸ್ಯರ ಪರವಾಗಿ ಬಿಸಿಎಫ್ ವಿದ್ಯಾರ್ಥಿವೇತನ ಕಮಿಟಿ ಅಧ್ಯಕ್ಷ ಎಂ.ಈ.ಮೂಳೂರು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.