ಅಮೆರಿಕದಲ್ಲಿ ಕೆಲಸ ಪರವಾನಿಗೆ ಪಡೆದವರಲ್ಲಿ 93 ಶೇ. ಭಾರತೀಯರು: ಕಾಂಗ್ರೆಸ್ ವರದಿ

Update: 2018-05-12 17:59 GMT

ವಾಶಿಂಗ್ಟನ್, ಮೇ 12: ಅಮೆರಿಕದಲ್ಲಿ ಕೆಲಸ ಮಾಡಲು ಪರವಾನಿಗೆ ಹೊಂದಿರುವ ಒಟ್ಟು ಎಚ್-4 ವೀಸಾದಾರರ ಪೈಕಿ 93 ಶೇಕಡ ಮಂದಿ ಭಾರತೀಯರು ಎಂದು ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ವರದಿಯೊಂದು ತಿಳಿಸಿದೆ.

ಕೆಲಸ ಮಾಡಲು ಪರವಾನಿಗೆ ಹೊಂದಿರುವ ಎಚ್-4 ವೀಸಾದಾರರ ಪೈಕಿ ಐದನೇ ಒಂದಕ್ಕೂ ಹೆಚ್ಚು ಭಾಗ ಕ್ಯಾಲಿಫೋರ್ನಿಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅದು ಹೇಳಿದೆ.

ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಎಚ್-4 ವೀಸಾಗಳನ್ನು ನೀಡಲಾಗುತ್ತದೆ.

 ಮಾಹಿತಿ ತಂತ್ರಜ್ಞಾನ ಮುಂತಾದ ಅತ್ಯಂತ ಪರಿಣತ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅಮೆರಿಕಕ್ಕೆ ಬರುವ ವಿದೇಶೀಯರಿಗೆ ಎಚ್-1ಬಿ ವೀಸಾಗಳನ್ನು ನೀಡಲಾಗುತ್ತದೆ.

ಉದ್ಯೋಗ ಪರವಾನಿಗೆ ಪಡೆದಿರುವ ಎಚ್-4 ವೀಸಾದಾರರ ಪೈಕಿ 93 ಶೇಕಡ ಮಹಿಳೆಯರು ಹಾಗೂ ಉಳಿದ 7 ಶೇ. ಪುರುಷರು ಎಂದು ಅಮೆರಿಕ ಕಾಂಗ್ರೆಸ್‌ನ ಕಾಂಗ್ರೆಶನಲ್ ರಿಸರ್ಚ್ ಸರ್ವಿಸ್‌ನ ವರದಿ ತಿಳಿಸಿದೆ.

‘‘ಕೆಲಸ ಮಾಡಲು ಪರವಾನಿಗೆ ಪಡೆದಿರುವ ಎಚ್-4 ವೀಸಾದಾರರ ಪೈಕಿ 93 ಶೇಕಡ ಭಾರತ ಸಂಜಾತರು, 5 ಶೇಕಡ ಮಂದಿ ಚೀನೀಯರು. ಉಳಿದ 2 ಶೇಕಡ ಪರವಾನಿಗೆಗಳನ್ನು ಇತರ ದೇಶಗಳು ಪಡೆದುಕೊಂಡಿವೆ’’ ಎಂದು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News