ರಶ್ಯದ ಬಾಂಬರ್‌ಗಳನ್ನು ತಡೆದ ಅಮೆರಿಕದ ಯುದ್ಧ ವಿಮಾನಗಳು

Update: 2018-05-12 18:17 GMT

ವಾಶಿಂಗ್ಟನ್, ಮೇ 12: ಅಲಾಸ್ಕ ಕರಾವಳಿಯ ಆಚೆ ಸಮುದ್ರದಲ್ಲಿ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಹಾರುತ್ತಿದ್ದ ರಶ್ಯದ ಎರಡು ಬಾಂಬರ್ ವಿಮಾನಗಳನ್ನು ಅಮೆರಿಕದ ಎರಡು ಯುದ್ಧ ವಿಮಾನಗಳು ತಡೆದವು.

ರಶ್ಯದ ಟಿಯು-95 ‘ಬೇರ್’ ಬಾಂಬರ್ ವಿಮಾನಗಳು ಅಲಾಸ್ಕ ಕರಾವಳಿಯಿಂದ 200 ಮೈಲಿ ದೂರದಲ್ಲಿರುವ ಏರ್ ಡಿಫೆನ್ಸ್ ಐಡೆಂಟಿಫಿಕೇಶನ್ ರೆನ್ ಪ್ರವೇಶಿಸಿದಾಗ, ಅಮೆರಿಕದ 2 ‘ನೊರಡ್ ಎಫ್-22’ ಯುದ್ಧ ವಿಮಾನಗಳು ತಡೆದವು ಎಂದು ಸಿಎನ್‌ಎನ್ ವರದಿ ಮಾಡಿದೆ.

ಅಂತಿಮವಾಗಿ ರಶ್ಯ ವಿಮಾನಗಳು ಈ ವಲಯದಿಂದ ಹೊರಹೋದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News