×
Ad

ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆ; ಶೇ.78.87 ಮತದಾನ

Update: 2018-05-12 23:56 IST

ಉಡುಪಿ, ಮೇ 12: ರಾಜ್ಯ ವಿಧಾನಸಭೆಗೆ ಇಂದು ನಡೆದ ಚುನಾವಣೆ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು ಶೇ.78.87ರಷ್ಟು ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ. ಕಳೆದ ಬಾರಿಯ (2013) ಚುನಾವಣೆಯಲ್ಲಿ ಶೇ.76.15ರಷ್ಟು ಮತದಾನವಾಗಿದ್ದು, ಈ ಬಾರಿ ನಿರೀಕ್ಷಿತ ಮಟ್ಟಕ್ಕಲ್ಲದಿದ್ದರೂ ಶೇ.2.72ರಷ್ಟು ಅಧಿಕ ಮತದಾನ ವಾಗಿದೆ.

ಜಿಲ್ಲೆಯ ಎಲ್ಲಿಂದಲೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಬೆಳಗ್ಗೆ ಮತದಾನ ಬಿರುಸಿನ ಪ್ರಾರಂಭಕಂಡಿದ್ದು, ಅಪರಾಹ್ನದವರೆಗೆ ಇಂದು ಮುಂದುವರಿದಿತ್ತು. ಆಗ ಈ ಬಾರಿ ಶೇ.82ರಿಂದ 85ರಷ್ಟು ಮತದಾನದ ನಿರೀಕ್ಷೆ ಮೂಡಿತ್ತು. ಆದರೆ ಸಂಜೆಯ ವೇಳೆ ಒಮ್ಮೆಗೇ ಮತದಾನ ನಿಧಾನಗತಿಗೆ ಜಾರಿ ಶೇ.80ನ್ನು ದಾಟಲು ಸಾಧ್ಯವಾಗಲಿಲ್ಲ.ಮತದಾನದ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿವೆ ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಮೂಲಗಳು ತಿಳಿಸಿವೆ.

ಈಗ ಸಿಕ್ಕಿರುವ ಮಾಹಿತಿಗಳಂತೆ ಬೈಂದೂರು ಕ್ಷೇತ್ರದಲ್ಲಿ ಶೇ.79.08 (ಕಳೆದ ಬಾರಿ ಶೇ.75.68), ಕುಂದಾಪುರದಲ್ಲಿ ಶೇ.79 (ಶೇ.75.93), ಉಡುಪಿಯಲ್ಲಿ 77.74 (75.89), ಕಾಪುವಿನಲ್ಲಿ ಶೇ.78.51 (ಶೇ.72.86)ಹಾಗೂ ಕಾರ್ಕಳ ಕ್ಷೇತ್ರದಲ್ಲಿ ಶೇ.80.13 (ಶೇ.80.56)ರಷ್ಟು ಮತದಾನವಾಗಿದೆ.

ಈಗ ಸಿಕ್ಕಿರುವ ಮಾಹಿತಿಗಳಂತೆ ಬೈಂದೂರು ಕ್ಷೇತ್ರದಲ್ಲಿ ಶೇ.79.08 (ಕಳೆದ ಬಾರಿ ಶೇ.75.68), ಕುಂದಾಪುರದಲ್ಲಿ ಶೇ.79 (ಶೇ.75.93), ಉಡುಪಿಯಲ್ಲಿ 77.74 (75.89), ಕಾಪುವಿನಲ್ಲಿ ಶೇ.78.51 (ಶೇ.72.86)ಹಾಗೂ ಕಾರ್ಕಳ ಕ್ಷೇತ್ರದಲ್ಲಿ ಶೇ.80.13 (ಶೇ.80.56)ರಷ್ಟು ಮತದಾನವಾಗಿದೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ.74ರಷ್ಟು ಮತದಾನವಾಗಿತ್ತು. 2004ರ ಚುನಾವಣೆಯಲ್ಲಿ ಮತದಾನ ಶೇ.57ನ್ನು ದಾಟಿರಲಿಲ್ಲ.

2008ರ ವಿಾನಸಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ.74ರಷ್ಟು ಮತದಾನವಾಗಿತ್ತು. 2004ರ ಚುನಾವಣೆಯಲ್ಲಿ ಮತದಾನ ಶೇ.57ನ್ನು ದಾಟಿರಲಿಲ್ಲ. ಉಡುಪಿ ಜಿಲ್ಲೆಯಲ್ಲಿ ಒಟ್ಟು 9,93,415 ಮತದಾರರಲ್ಲಿ 7,83,497 ಮಂದಿ (78.87) ಇಂದು ಮತ ಚಲಾಯಿಸಿದ್ದಾರೆ. 4,78,350 ಪುರುಷ ಮತದಾರರಲ್ಲಿ 3,69,004 (ಶೇ.77.14) ಮಂದಿ ಮತ ಚಲಾಯಿಸಿದ್ದರೆ, 5,15,041 ಮಹಿಳಾ ಮತದಾರದಲ್ಲಿ 4,14,491 ಮಂದಿ (ಶೇ.80.48) ಮತ ಹಾಕಿದ್ದಾರೆ. 24 ಮಂದಿ ಇತರೆ ಮತದಾರರಲ್ಲಿ ಕಾಪುವಿನ ಕೇವಲ ಇಬ್ಬರು ಮಾತ್ರ ಮತ ಹಾಕಿದ್ದಾರೆ.

ಬೈಂದೂರು ಕ್ಷೇತ್ರ: ಒಟ್ಟು 2,22,427 ಮತದಾರರಲ್ಲಿ 1,75,888 ಮಂದಿ(ಶೇ.79.08) ಮತ ಚಲಾಯಿಸಿದ್ದಾರೆ. 1,08,154 ಪುರುಷ ಮತದಾರರಲ್ಲಿ 81,067 ಮಂದಿ (ಶೇ.74.96), 1,14,259 ಮಹಿಳಾ ಮತದಾರರರಲ್ಲಿ 94,821 ಮಂದಿ (ಶೇ.82.99) ಮತ ಚಲಾಯಿಸಿದ್ದಾರೆ. 14 ಇತರೆ ಮತದಾರರ ಮತಗಟ್ಟೆಗೇ ಬರಲಿಲ್ಲ.

ಕುಂದಾಪುರ ಕ್ಷೇತ್ರ: ಒಟ್ಟು 1,99,575 ಮತದಾರರಲ್ಲಿ 1,57,660 ಮಂದಿ (ಶೇ.79) ಮತ ಚಲಾಯಿಸಿದ್ದಾರೆ. 95,927 ಪುರುಷರಲ್ಲಿ 74,182 (ಶೇ.77.33) ಮಂದಿ, 1,03,648 ಮಹಿಳಾ ಮತದಾರರಲ್ಲಿ 83,478 ಮಂದಿ (ಶೇ.80.54) ಮಂದಿ ಮತ ಚಲಾಯಿಸಿದ್ದಾರೆ. ಇಲ್ಲಿ ಇತರೆ ಮತದಾರರಿಲ್ಲ.

ಉಡುಪಿ ಕ್ಷೇತ್ರ: ಒಟ್ಟು 2,07,431 ಮತದಾರರಲ್ಲಿ 1,61,263 ಮಂದಿ (ಶೇ.77.74) ಇಂದು ಮತ ಚಲಾಯಿಸಿದ್ದಾರೆ. 1,00,535 ಪುರುಷ ಮತದಾರರಲ್ಲಿ 77,705 ಮಂದಿ (ಶೇ.77.29) ಹಾಗೂ 1,06,892 ಮಹಿಳಾ ಮತದಾರರಲ್ಲಿ 83,558ಮಂದಿ (ಶೇ.78.17) ಮತ ಚಲಾಯಿಸಿದ್ದಾರೆ. ನಾಲ್ವರು ಇತರೆ ಮತದಾರರಲ್ಲಿ ಒಬ್ಬರೂ ಮತ ಹಾಕಿಲ್ಲ.

ಕಾಪು ಕ್ಷೇತ್ರ: ಒಟ್ಟು 1,82,972ಮಂದಿ ಮತದಾರರಲ್ಲಿ 1,43,651 ಮಂದಿ (ಶೇ.78.51) ಮತ ಹಾಕಿದ್ದಾರೆ. 87,020 ಪುರುಷ ಮತದಾರರಲ್ಲಿ 67,166 ಮಂದಿ (ಶೇ.77.18) ಹಾಗೂ 95,948 ಮಹಿಳಾ ಮತದಾರರಲ್ಲಿ 76,483 ಮಂದಿ (ಶೇ.79.71) ಮತದಾನ ಮಾಡಿದ್ದಾರೆ. ಇತರೆ ನಾಲ್ವರು ಮತದಾರ ರಲ್ಲಿ ಇಬ್ಬರು ಮಾತ್ರ ಮತ ಹಾಕಿದ್ದಾರೆ.

ಕಾರ್ಕಳ ಕ್ಷೇತ್ರ: ಒಟ್ಟು 1,81,010 ಮತದಾರರಲ್ಲಿ 1,45,035 ಮಂದಿ (ಶೇ.80.13) ಮತ ಹಾಕಿದ್ದಾರೆ. 86,714 ಪುರುಷ ಮತದಾರರಲ್ಲಿ 68,884 ಮಂದಿ (ಶೇ.79.44) ಹಾಗೂ 94,294 ಮಹಿಳಾ ಮತದಾರರಲ್ಲಿ 76,151 ಮಂದಿ (ಶೇ.80.76) ಮಂದಿ ಮತ ಹಾಕಿದ್ದಾರೆ. ಇಬ್ಬರು ಇತರೆ ಮತದಾರರು ಮತದಾನಕ್ಕೆ ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News