×
Ad

ವಿವಿ ಪ್ಯಾಟ್ ಸಮಸ್ಯೆ: ಮತದಾನ ಪ್ರಕ್ರಿಯೆ ವಿಳಂಬ

Update: 2018-05-12 23:59 IST

ಉಡುಪಿ, ಮೇ 12: ಉಡುಪಿ ವಿಧಾನಸಭಾ ಕ್ಷೇತ್ರದ ಕೊಡವೂರು ಮೂಡ ಬೆಟ್ಟು ಶಾಲೆಯ 153ನೆ ಮತಗಟ್ಟೆಯ ವಿವಿ ಪ್ಯಾಟ್‌ನಲ್ಲಿ ಕಾಣಿಸಿಕೊಂಡ ತೊಂದರೆಯಿಂದಾಗಿ ಸಂಜೆ 6:40ರವರೆಗೆ ಮತದಾನದ ಪ್ರಕ್ರಿಯೆ ನಡೆಯಿತು.

153ನೆ ಮತಗಟ್ಟೆ ವ್ಯಾಪ್ತಿಯಲ್ಲಿ ಸುಮಾರು 1387 ಮತದಾರರಿದ್ದು, ವಿವಿ ಪ್ಯಾಟ್ ಸಮಸ್ಯೆಯಿಂದಾಗಿ ಮತದಾನ ಪ್ರಕ್ರಿಯೆ ನಿಧಾನ ಗತಿಯಲ್ಲಿ ಸಾಗು ತ್ತಿತ್ತು. ಇದರಿಂದ 200ಕ್ಕೂ ಅಧಿಕ ಮತದಾರರು ಸಂಜೆಯವರೆಗೆ ಸರತಿ ಸಾಲಿ ನಲ್ಲಿ ಕಾಯುವ ಪರಿಸ್ಥಿತಿ ಉಂಟಾಯಿತು.

ಅಧಿಕಾರಿಗಳ ವಿರುದ್ಧ ಮತದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ಸ್ಥಳದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಬಳಿಕ ಹೆಚ್ಚಿನ ಸಂಖ್ಯೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಸಂಜೆ ಆರು ಗಂಟೆಯೊಳಗೆ ಮತದಾನಕ್ಕೆ ಆಗಮಿಸಿದ ಎಲ್ಲರಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಯಿತು. ಆರು ಗಂಟೆಯ ನಂತರ ಸುಮಾರು 40ಕ್ಕೂ ಅಧಿಕ ಮತದಾರರು ಸಾಲಿನಲ್ಲಿ ನಿಂತು ಸಂಜೆ 6:40ರವರೆಗೆ ಮತಾನ ಮಾಡಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News