×
Ad

​ಅಕ್ರಮ ಮತ ಚಲಾವಣೆಗೆ ಯತ್ನ: ದೂರು

Update: 2018-05-13 00:11 IST

ಮಂಗಳೂರು, ಮೇ 12: ಎರಡು ಕಡೆ ಅಕ್ರಮ ಮತ ಚಲಾವಣೆಗೆ ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನ ಮೇಲೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೋಜ್ ಬಂಗೇರಾ ಪ್ರಕರಣದ ಆರೋಪಿ. ಈತ ಮಂಗಳೂರು ದಕ್ಷಿಣ ಭಾಗ ಸಂಖ್ಯೆ 75ರಲ್ಲಿ ಕ್ರಮಸಂಖ್ಯೆ 1144, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ 71ರ ಕ್ರಮಸಂಖ್ಯೆ 943ರಲ್ಲಿ ಅಕ್ರಮ ಮತಚಲಾವಣೆಗೆ ಪ್ರಯತ್ನಿಸಿದ್ದಾನೆಂದು ಆರೋಪಿಸಲಾಗಿದೆ.

ನಕಲಿ ಮತದಾನಕ್ಕೆ ಯತ್ನಿಸಿರುವ ವ್ಯಕ್ತಿಯ ಬಗ್ಗೆ ಸುನೀಲ್ ಕೊಂಚಾಡಿ ಎಂಬವರು ಉರ್ವ ಠಾಣೆಗೆ ದೂರು ನೀಡಿದ್ದು, ಉರ್ವ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News