ದ.ಕ. : ಶೇ. 77.63 ಮತದಾನ
ಮಂಗಳೂರು, ಮೇ 12: ವಿಧಾನಸಭಾ ಚುನಾವಣೆ ದ.ಕ. ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಜಿಲ್ಲೆಯಲ್ಲಿ ಮತ ಯಂತ್ರಗಳಿಗಳಿಗೆ ಸಂಬಂಧಿಸಿ 24 ಕಂಟ್ರೋಲ್ ಯೂನಿಟ್, 21 ಬ್ಯಾಲೆಟ್ ಯೂನಿಟ್ ಹಾಗೂ 42 ವಿವಿಪ್ಯಾಟ್‌ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದ ಹಿನ್ನೆಲೆಯಲ್ಲಿ ತಕ್ಷಣ ತಾಂತ್ರಿಕ ತಜ್ಞರನ್ನು ಕಳುಹಿಸಿ ಸರಿಪಡಿಸಲಾಯಿತು.
ವಿಧಾನಸಭಾ ಕ್ಷೇತ್ರವಾರು ಶೇಕಡಾವಾರು ವಿವರ ಹೀಗಿದೆ:
ಬೆಳ್ತಂಗಡಿ 81.40, ಮೂಡಬಿದ್ರೆ 75.41, ಮಂಗಳೂರು ನಗರ ಉತ್ತರ 74.55, ಮಂಗಳೂರು ನಗರ ದಕ್ಷಿಣ 67.47, ಮಂಗಳೂರು 75.73, ಬಂಟ್ವಾಳ 81.89, ಪುತ್ತೂರು 81.70 ಹಾಗೂ ಸುಳ್ಯ 83.00.ಚುನಾವಣೆ ಘೋಷಣೆಯಾದಾಗಿನಿಂದ ಇಂದಿನವರೆಗೆ ಚುನಾವಣೆ ಶಾಂತಿಯುತ ಮತ್ತು ಸುಸೂತ್ರವಾಗಿ ನಡೆಯಲು ಸಹಕರಿಸಿದ ಎಲ್ಲಾ ಮತದಾರರಿಗೆ, ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳ ಮುಖಂಡರಿಗೆ, ಮಾಧ್ಯಮ ಮಿತ್ರರಿಗೆ, ಅಧಿಕಾರಿಗಳು, ಸಿಬ್ಬಂದಿಗೆ ಹಾಗೂ ಭದ್ರತಾ ಸಿಬ್ಬಂದಿಗೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸೆಸಿಕಾಂತ್ ಸೆಂಥಿಲ್ ಕೃತಜ್ಞತೆ ಸಲ್ಲಿಸಿದ್ದಾರೆ.