ಲಾಲೂ ಮಗನ ವಿವಾಹದಲ್ಲಿ ಉಂಡವನೇ ಜಾಣ!
Update: 2018-05-13 09:41 IST
ಪಾಟ್ನಾ, ಮೇ 13: ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್‌ಪ್ರತಾಪ್ ಯಾದವ್ ಅವರ ವಿವಾಹ ಸಮಾರಂಭದಲ್ಲಿ ಊಟಕ್ಕಾಗಿ ಕಿತ್ತಾಟ, ಗದ್ದಲ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಉದ್ರಿಕ್ತ ಗುಂಪು ಗಣ್ಯರು ಮತ್ತು ಪತ್ರಕರ್ತರ ಊಟದ ವ್ಯವಸ್ಥೆ ಮಾಡಿದ ಜಾಗಕ್ಕೆ ನುಗ್ಗಿ, ಆಹಾರ ಪದಾರ್ಥಗಳನ್ನು ಅಕ್ಷರಶಃ ಕಿತ್ತುಕೊಂಡಿತು.
ಆರ್‌ಜೆಡಿ ಶಾಸಕಿ ಚಂದ್ರಿಕಾ ರಾಯ್ ಪುತ್ರಿ ಐಶ್ವರ್ಯ ರಾಯ್ ಅವರ ಜತೆ ತೇಜ್‌ಪ್ರತಾಪ್ ಅವರ ವಿವಾಹವು ಶನಿವಾರ ನಡೆದಿತ್ತು. ನವ ವಧು-ವರರು ಹಾರ ವಿನಿಮಯ ಮಾಡಿಕೊಳ್ಳುತ್ತಿದ್ದಂತೇ ಭೋಜನ ಶಾಲೆಯಲ್ಲಿ ಕಿತ್ತಾಟ ಆರಂಭವಾಯಿತು. ಇಡೀ ಭೋಜನಶಾಲೆಯಲ್ಲಿ ಮುರಿದ ಪಾತ್ರೆಗಳು ಮತ್ತು ಮೇಜು- ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಮುಖಂಡರು ನಡೆಸಿದ ಪ್ರಯತ್ನ ವಿಫಲವಾಗಿದ್ದವು.