ಮಲಾರ್: ಇಮಾಮ್ಸ್ ಕೌನ್ಸಿಲ್ ವತಿಯಿಂದ ರಕ್ತದಾನ
Update: 2018-05-13 17:48 IST
ಮಂಗಳೂರು, ಮೇ 13: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ಮತ್ತು ಯೆನಪೊಯ ಆಸ್ಪತ್ರೆಯ ವತಿಯಿಂದ ಮಲಾರ್ ಪದವು ಸೆಂಟ್ರಲ್ ಮುಸ್ಲಿಂ ಶಾಲೆಯಲ್ಲಿ ರವಿವಾರ ರಕ್ತದಾನ ಶಿಬಿರ ನಡೆಯಿತು.
ಇಮಾಮ್ಸ್ ಕೌನ್ಸಿಲ್ ದ.ಕ. ಜಿಲ್ಲಾಧ್ಯಕ್ಷ ರಫೀಕ್ ದಾರಿಮಿಯ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಇಮಾಮ್ಸ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಉದ್ಘಾಟಿಸಿದರು.
ಯೆನಪೊಯ ಆಸ್ಪತ್ರೆಯ ವೈದ್ಯಾ ಡಾ.ಶಬಾ, ಪಿಎಫ್‌ಐ ನಾಯಕರಾದ ಯು.ಬಿ.ಸಿದ್ದೀಕ್, ಸೈಯದ್ ದೇರಳಕಟ್ಟೆ , ಅರಸ್ತಾನ ಮಸೀದಿಯ ಖತೀಬ್ ರಿಯಾಝ್ ಫೈಝಿ, ನಾಸಿರ್ ಮಲಾರ್ ಮಾತನಾಡಿದರು. ಝಾಹಿದ್ ಮಲಾರ್ ಸ್ವಾಗತಿಸಿದರು. ಹಮೀದ್ ವಂದಿಸಿದರು.