ತನ್ನ ಆಸ್ತಿ ಉಳಿಸಲು ನವಾಝ್ ಶರೀಫ್ ‘ಮೋದಿಯ ಭಾಷೆ’ಯಲ್ಲಿ ಮಾತನಾಡುತ್ತಿದ್ದಾರೆ: ಇಮ್ರಾನ್ ಖಾನ್

Update: 2018-05-13 14:40 GMT

ಹೊಸದಿಲ್ಲಿ, ಮೇ 13: 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿತ್ತು ಎಂದು ನವಾಝ್ ಶರೀಫ್ ಒಪ್ಪಿಕೊಂಡ ನಂತರ ಪಾಕ್ ನ ಮಾಜಿ ಪ್ರಧಾನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್, ನವಾಝ್ ಅವರು ತನ್ನ ಪುತ್ರನ ಕಂಪೆನಿಯಲ್ಲಿರುವ ಸಂಪತ್ತನ್ನು ಕಾಪಾಡಿಕೊಳ್ಳಲು ‘ನರೇಂದ್ರ ಮೋದಿಯವರ ಭಾಷೆಯಲ್ಲಿ’ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

“ನವಾಝ್ ಶರೀಫ್ ಅವರು ವೈಯಕ್ತಿಕ ಲಾಭಕ್ಕಾಗಿ ಬ್ರಿಟಿಷರ ಜೊತೆ ಕೈಜೋಡಿಸಿದ ಆಧುನಿಕ ಮೀರ್ ಜಾಫರ್ ಇದ್ದಂತೆ. ತನ್ನ ಪುತ್ರನ ಕಂಪೆನಿಯಲ್ಲಿರುವ ಸಂಪತ್ತನ್ನು ರಕ್ಷಿಸುವುದಕ್ಕಾಗಿ ಅವರು ಮೋದಿಯ ಭಾಷೆಯ ಹಾಗೆ ಪಾಕಿಸ್ತಾನದ ವಿರುದ್ಧ ಮಾತನಾಡುತ್ತಿದ್ದಾರೆ” ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪಾಕ್ ನ ಮಾಜಿ ಪ್ರಧಾನಿ ನವಾಝ್ ಶರೀಫ್, ಪಾಕ್ ಭಯೋತ್ಪಾದಕರು 26/11 ಮುಂಬೈ ದಾಳಿ ನಡೆಸಿದ್ದರು ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News