ದ.ಕ. ಎಸ್ಐಒ ನೂತನ ಜಿಲ್ಲಾಧ್ಯಕ್ಷರಾಗಿ ಅಹ್ಮದ್ ಮುಬೀನ್

Update: 2018-05-13 14:51 GMT

ಮಂಗಳೂರು, ಮೇ 13: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್ಐಒ) ದ.ಕ. ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಮುಬೀನ್ ಆಯ್ಕೆಯಾಗಿದ್ದಾರೆ.

ಎಸ್ಐಒ ರಾಜ್ಯ ಸಲಹಾ ಸಮಿತಿ ಸದಸ್ಯ ಯಾಸಿನ್  ಕೋಡಿಬೆಂಗ್ರೆ ರವರ ಉಸ್ತುವಾರಿಯಲ್ಲಿ 2018 ನೇ ಬಾಕಿ ಇರುವ ಅವಧಿಗೆ ನಗರದ  ಹಿದಾಯತ್  ಸೆಂಟರ್ ನಲ್ಲಿ  ನಡೆದ ಚುನಾವಣೆಯಲ್ಲಿ ಅಹ್ಮದ್  ಮುಬೀನ್ ರನ್ನು ಆಯ್ಕೆ ಮಾಡಲಾಯಿತು.

ಬ್ರೈಟ್ ಪಬ್ಲಿಕ್ ಶಾಲೆಯಲ್ಲಿ ಅಧ್ಯಾಪಕರಾಗಿರುವ ಅಹ್ಮದ್  ಮುಬೀನ್, ಮಂಗಳೂರಿನ ಬೆಂಗ್ರೆಯ‌‌ ನಿವಾಸಿಯಾಗಿದ್ದಾರೆ.  ಕೇರಳದ ಶಾಂತಪುರಂನಲ್ಲಿರುವ  ಅಲ್ ಜಾಮಿಯಾ ಅಲ್ ಇಸ್ಲಾಮಿಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಧಾರ್ಮಿಕ ವಿದ್ಯಾಭ್ಯಾಸವನ್ನೂ ಮುಗಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ‌ ಸಮಸ್ಯೆಗಳಿಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 35 ವರ್ಷಗಳಿಂದ ದೇಶದಾದ್ಯಂತ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಎಸ್ಐಒ, ಇಂದು ದೇಶದ ವಿದ್ಯಾರ್ಥಿ ಆಂದೋಲನವಾಗಿ ಗುರುತಿಸಲ್ಪಡಲು ಸದಸ್ಯರು ಹಾಗೂ ಕಾರ್ಯಕರ್ತರ  ಪ್ರಾಮಾಣಿಕ ಪ್ರಯತ್ನವೇ ಕಾರಣ.‌ ಈ‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ‌ನಮ್ಮ ಜೊತೆಗೆ ಇನ್ನಷ್ಟು ಜೊತೆಯಾಗಲು ಉತ್ಸುಕರಾಗಿ ಕಾರ್ಯ ನಿರ್ವಹಿಸಬೇಕು. ಜೊತೆಗೆ, ದೇಶದ ಬೆಳವಣಿಗೆ ಹಾಗೂ ಬದಲಾವಣೆಗಳಲ್ಲಿ ಮಹತ್ತರ ಪಾತ್ರ ವಹಿಸಲು ನಾವೆಲ್ಲರೂ ಶ್ರಮ ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಗಮಿತ ಜಿಲ್ಲಾಧ್ಯಕ್ಷ ತಲ್ಹ ಇಸ್ಮಾಯಿಲ್ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಎಸ್ಐಒ ದಕ್ಷಿಣ ಕನ್ನಡ ನಾ ನಾ ರೀತಿಯ ಕಾರ್ಯಕ್ರಮ ಗಳನ್ನು ಹಮ್ಮಿ ಕೊಳ್ಳುವ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಿದೆ. ಇದರಿಂದಾಗಿ  ಬರುವ ದಿನ ಗಳಲ್ಲಿ  ಒಂದು ಉತ್ತಮ ಸಂತುಲಿತ ಚಿಂತನೆಯುಳ್ಳ ಸರ್ವರನ್ನು ಸಮಾನವಾಗಿ ಕಾಣುವ ದೇಶದ ಸಮಗ್ರ ಅಭಿವೃದ್ಧಿಗೆ ದುಡಿಯಲು ಹುಮ್ಮಸ್ಸಿರುವ ಒಂದು ಯುವ ಸಮೂಹವನ್ನು ಸೃಷ್ಟಿಸಿದೆ ಇಂತಹ ನಿರಂತರ ಪ್ರಯತ್ನದಿಂದ ಸಮಾಜದ ನವನಿರ್ಮಾಣ ಸಾಧ್ಯ ಆದ್ದರಿಂದಾಗಿ ವಿದ್ಯಾರ್ಥಿಗಳು ಎಸ್ಐಒ ನ ಚಿಂತನೆಗಳನ್ನು ತಿಳಿದು ಅದರ ಜೊತೆಗೂಡಿ ಸಮಾಜದ ನವನಿರ್ಮಾಣ ಮಾಡಬೇಕಾಗಿದೆ ಎಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ಡ್ಯಾನಿಷ್ ಚೆಂಡಾಡಿ ನೂತನ ಅಧ್ಯಕ್ಷರಿಗೆ ಶುಭ ಕೋರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News