×
Ad

ಕಾಪು ಕ್ಷೇತ್ರದ ಬಾಳೆಬೈಲು ಮತಗಟ್ಟೆಯಲ್ಲಿ ಶೇ.93.37 ಅತ್ಯಧಿಕ ಮತದಾನ

Update: 2018-05-13 21:54 IST

ಉಡುಪಿ, ಮೇ 13: ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಒಟ್ಟು 1103 ಮತಗಟ್ಟೆಗಳಲ್ಲಿ ಒಟ್ಟು ಶೇ.78.83 ಮತದಾನ ದಾಖಲಾ ಗಿದ್ದು, 2013ರ ಚುನಾವಣೆ(ಶೇ.76.15)ಗೆ ಹೋಲಿಸಿದರೆ ಈ ಬಾರಿ ಶೇ.2.68ರಷ್ಟು ಅಧಿಕ ಮತದಾನವಾಗಿದೆ ಎಂದು ಅಂತಿಮ ಅಧಿಕೃತ ಪ್ರಕಟಣೆ ತಿಳಿಸಿದೆ.

ಜಿಲ್ಲೆಯ ಒಟ್ಟು 9,93,415 ಮಂದಿ ಮತದಾರರಲ್ಲಿ 7,83,497 ಮಂದಿ ಮತದಾನ ಮಾಡಿದ್ದು, ಈ ಪೈಕಿ 4,78,350 ಪುರುಷರಲ್ಲಿ 3,68,998 ಮಂದಿ (ಶೇ.77.14) ಹಾಗೂ 5,15,041 ಮಹಿಳೆಯರಲ್ಲಿ 4,14,144 ಮಂದಿ (ಶೇ.80.41) ಮತ್ತು 24 ಇತರಲ್ಲಿ ನಾಲ್ಕು ಮಂದಿ(ಶೇ.16.67) ಮತದಾನ ಮಾಡಿದ್ದಾರೆ.

ಬೈಂದೂರು ಕ್ಷೇತ್ರದ ಒಟ್ಟು 246 ಮತಗಟ್ಟೆಗಳಲ್ಲಿ ಶೇ.78.93 ಮತದಾನ ಆಗಿದ್ದು, ಒಟ್ಟು 2,22,427 ಮತದಾರರಲ್ಲಿ 1,75,558 ಮಂದಿ (1,08,154 ಪುರುಷರಲ್ಲಿ 81,051, 1,14,259 ಮಹಿಳೆಯರಲ್ಲಿ 94,507) ಮಂದಿ ಮತದಾನ ಮಾಡಿದ್ದಾರೆ.

ಕುಂದಾಪುರ ಕ್ಷೇತ್ರದ ಒಟ್ಟು 218 ಮತಗಟ್ಟೆಗಳಲ್ಲಿ ಶೇ.79ರಷ್ಟು ಮತದಾನ ಆಗಿದ್ದು ಒಟ್ಟು 199575 ಮತದಾರರಲ್ಲಿ 157660 ಮಂದಿ(95,927 ಪುರುಷರಲ್ಲಿ 74,182, 1,03,648 ಮಹಿಳೆಯಲ್ಲಿ 83,478) ಮತದಾನ ಮಾಡಿದ್ದಾರೆ.

ಕಾರ್ಕಳ ಕ್ಷೇತ್ರದ 207 ಮತಗಟ್ಟೆಗಳಲ್ಲಿ ಶೇ.80.13 ಮತದಾನವಾಗಿದ್ದು, ಒಟ್ಟು 181010 ಮತದಾರರಲ್ಲಿ 145035 ಮತದಾರರು(86714 ಪುರುಷ ರಲ್ಲಿ 68884, 92294 ಮಹಿಳೆಯರಲ್ಲಿ 76151) ಮತ ಚಲಾಯಿಸಿದ್ದಾರೆ.

ಉಡುಪಿ ಕ್ಷೇತ್ರದ 225 ಮತಗಟ್ಟೆಗಳಲ್ಲಿ ಶೇ.77.73 ಮತದಾನವಾಗಿದ್ದು, ಒಟ್ಟು 207431 ಮತದಾರರಲ್ಲಿ 161242(1,00,514 ಪುರುಷರಲ್ಲಿ 77,705 ಮಂದಿ ಹಾಗೂ 1,06,913 ಮಹಿಳೆಯರಲ್ಲಿ 83,525) ಮತದಾನ ಮಾಡಿದ್ದಾರೆ. ಕಾಪು ಕ್ಷೇತ್ರದ ಒಟ್ಟು 207 ಮತಗಟ್ಟೆಗಳಲ್ಲಿ ಶೇ.78.51 ಮತದಾನವಾಗಿದ್ದು, ಒಟ್ಟು 182972 ಮತದಾರರಲ್ಲಿ 143651 ಮಂದಿ(87,020 ಪುರುಷರಲ್ಲಿ 67,166 ಹಾಗೂ 95,948 ಮಹಿಳೆಯರಲ್ಲಿ 76,483) ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಈ ಬಾರಿ ಗರಿಷ್ಠ ಮತದಾನ ಶೇ.80.13 ಕಾರ್ಕಳ ಕ್ಷೇತ್ರದಲ್ಲಿ ಆಗಿದ್ದರೆ, ಕನಿಷ್ಠ ಮತದಾನ ಶೇ.77.73 ಉಡುಪಿ ಕ್ಷೇತ್ರದಲ್ಲಿ ಆಗಿದೆ. ಮತಗಟ್ಟೆವಾರು ಗರಿಷ್ಠ ಮತದಾನ ಕಾಪು ಕ್ಷೇತ್ರದ ಬಾಳೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರನೆ ಮತಗಟ್ಟೆಯಲ್ಲಿ ಶೇ.93.37(ಒಟ್ಟು 702 ಮತದಾರರಲ್ಲಿ 662 ಮಂದಿ ಮತದಾನ) ಮತ್ತು ಕನಿಷ್ಠ ಮತದಾನ ಉಡುಪಿ ಕ್ಷೇತ್ರ ಮಣಿಪಾಲ ಪದವಿ ಪೂರ್ವ ಕಾಲೇಜಿನ 128ನೆ ಮತಗಟ್ಟೆಯಲ್ಲಿ ಶೇ.55.42 (ಒಟ್ಟು 729 ಮತದಾರರಲ್ಲಿ 404 ಮಂದಿ ಮತದಾನ) ಮತದಾನ ಆಗಿದೆ.

2851 ದಿವ್ಯಾಂಗರಿಂದ ಮತದಾನ
ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿರುವ ಒಟ್ಟು 8,054 ದಿವ್ಯಾಂಗ ಮತದಾರರಲ್ಲಿ 2851 (ಶೇ.35.39) ಮಂದಿ ಮತದಾನ ಮಾಡಿ ದ್ದಾರೆ. ಬೈಂದೂರು ಕ್ಷೇತ್ರದಲ್ಲಿ 625, ಕುಂದಾಪುರ- 265, ಉಡುಪಿ- 417, ಕಾಪು- 438, ಕಾರ್ಕಳ ಕ್ಷೇತ್ರದಲ್ಲಿ 1106 ದಿವ್ಯಾಂಗ ಮತದಾರರು ಮ್ಮ ಮತವನ್ನು ಚಲಾಯಿಸಿದ್ದಾರೆ.

ಕ್ಷೇತ್ರವಾರು ಕನಿಷ್ಠ -ಗರಿಷ್ಠ ಮತದಾನ

ಬೈಂದೂರು ಕ್ಷೇತ್ರ: ಗರಿಷ್ಠ- ಉಪ್ಪುಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 73ನೆ ಮತಗಟ್ಟೆಯಲ್ಲಿ ಶೇ.91.51, ಕನಿಷ್ಠ- ಗಂಗೊಳ್ಳಿಯ ಸ್ಟೆಲ್ಲಾ ಮೇರಿ ಹೈಸ್ಕೂಲ್ನ 173ನೆ ಮತಗಟ್ಟೆಯಲ್ಲಿ ಶೇ.56.20 

ಕುಂದಾಪುರ ಕ್ಷೇತ್ರ: ಗರಿಷ್ಠ- ಕೋಟ ಗ್ರಾಪಂ ಕಚೇರಿಯ 152ನೆ ಮತಗಟ್ಟೆ ಯಲ್ಲಿ ಶೇ.91.75, ಕನಿಷ್ಠ- ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿ 18ನೆ ಮತಗಟ್ಟೆಯಲ್ಲಿ ಶೇ.65.49

ಕಾರ್ಕಳ ಕ್ಷೇತ್ರ: ಗರಿಷ್ಠ- ಎಳ್ಳಾರೆ ಮುಲ್ಕಾಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 35ನೆ ಮತಗಟ್ಟೆಯಲ್ಲಿ ಶೇ.90.79, ಕನಿಷ್ಠ- ಕುಕ್ಕುಂದೂರು ಜಯಂತಿ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 107ನೆ ಮತಗಟ್ಟೆಯಲ್ಲಿ ಶೇ.67.24

ಉಡುಪಿ ಕ್ಷೇತ್ರ: ಗರಿಷ್ಠ- ನಾಲ್ಕೂರು ಸರಕಾರಿ ಪ್ರೌಢಶಾಲೆಯ 44ನೆ ಮತಗಟ್ಟೆಯಲ್ಲಿ ಶೇ.88.14, ಕನಿಷ್ಠ- ಮಣಿಪಾಲ ಪದವಿ ಪೂರ್ವ ಕಾಲೇಜಿನ 128ನೆ ಮತಗಟ್ಟೆಯಲ್ಲಿ ಶೇ.55.42

ಕಾಪು ಕ್ಷೇತ್ರ: ಗರಿಷ್ಠ- ಬಾಳೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರನೆ ಮತಗಟ್ಟೆಯಲ್ಲಿ ಶೇ.93.37, ಕನಿಷ್ಠ- ಕಟ್ಟಿಂಗೇರಿ ಅಂಗನವಾಡಿ ಕಟ್ಟಡದ 103ನೆ ಮತಗಟ್ಟೆಯಲ್ಲಿ ಶೇ.61.47

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News