×
Ad

ಶಿರೂರು ಪಿಂಕ್ ಮತಗಟ್ಟೆಯಲ್ಲಿ ಅಧಿಕ ಮಹಿಳೆಯರ ಮತದಾನ

Update: 2018-05-13 21:56 IST

ಉಡುಪಿ, ಮೇ 13: ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಉಡುಪಿ ಜಿಲ್ಲೆಯ ಒಟ್ಟು 10 ಪಿಂಕ್ ಮತಗಟ್ಟೆಗಳಲ್ಲಿ ಬೈಂದೂರು ಕ್ಷೇತ್ರದ ಶಿರೂರು ಗ್ರಾಪಂ ಕಚೇರಿಯ ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ.

ಮಹಿಳಾ ಮತದಾರರ ಸಂಖ್ಯೆ ಶೇ.50ಕ್ಕಿಂತಲೂ ಅಧಿಕವಿರುವ ಮತಗಟ್ಟೆ ಗಳನ್ನು ಪಿಂಕ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಇದರಲ್ಲಿ ಬೈಂದೂರು ಕ್ಷೇತ್ರದ ಶಿರೂರು ಗ್ರಾಪಂ ಕಚೇರಿಯಲ್ಲಿನ ಮತಗಟ್ಟೆಯ ಒಟ್ಟು 770(396 ಮಹಿಳೆಯರಲ್ಲಿ 340 ಮತದಾನ- ಶೇ.85.86) ಮತದಾರರಲ್ಲಿ 636 ಮಂದಿ (ಶೇ.81.54) ಮತದಾ ಮಾಡಿದ್ದಾರೆ.

ಉಳಿದಂತೆ ಕುಂದಾಪುರ ವಡೇರಹೋಬಳಿ ಪಿ.ವಿ.ಎಸ್. ಸರೋಜಿನಿ ಮಧು ಸೂದನ ಕುಶೆ ಸರಕಾರಿ ಪ್ರೌಡಶಾಲೆಯ ಮತಗಟ್ಟೆಯ ಒಟ್ಟು 1038 (552 ಮಹಿಳೆಯರಲ್ಲಿ 425ಮತದಾನ- ಶೇ.76.99) ಮತದಾರರಲ್ಲಿ 804 ಮಂದಿ (ಶೇ.77.46), ಕಾಪು ಕ್ಷೇತ್ರದ ಕುರ್ಕಾಲು ಗ್ರಾಪಂ ಕಚೇರಿ ಮತಗಟ್ಟೆಯ ಒಟ್ಟು 1202(648 ಮಹಿಳೆಯರಲ್ಲಿ 505 ಮತದಾನ- ಶೇ.77.93) ಮತದಾರರಲ್ಲಿ 896 ಮಂದಿ(ಶೇ.74.54) ಮತ ಚಲಾಯಿಸಿದ್ದಾರೆ.

ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿನ 198 ಮತಗಟ್ಟೆಯಲ್ಲಿ ಒಟ್ಟು 693 (356ಮಹಿಳೆಯರಲ್ಲಿ 237 ಮತದಾನ- ಶೇ.66.57)ಮತದಾರರಲ್ಲಿ 457 ಮಂದಿ(ಶೇ.65.95), 198 ಎ ಮತಗಟ್ಟೆಯ ಒಟ್ಟು 763(400 ಮಹಿಳೆಯ ರಲ್ಲಿ 267 ಮತದಾನ -ಶೇ.66.75) ಮತದಾರರಲ್ಲಿ 504 ಮಂದಿ (ಶೇ.66.06), 199 ಮತಗಟ್ಟೆಯ ಒಟ್ಟು 975(492ಮಹಿಳೆಯರಲ್ಲಿ 352 ಮತದಾನ- ಶೇ.71.69) ಮತದಾರರಲ್ಲಿ 668 ಮಂದಿ(ಶೇ.68.51) ಮತ ದಾನ ಮಾಡಿದ್ದಾರೆ.

ಕನ್ನರ್ಪಾಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಉತ್ತರ ಭಾಗದ ಮತಗಟ್ಟೆಯ ಒಟ್ಟು 1076(546ಮಹಿಳೆಯರಲ್ಲಿ 407 ಮತದಾನ -ಶೇ.74.54) ಮತದಾರರಲ್ಲಿ 834 ಮಂದಿ(ಶೇ.77.51) ಹಾಗೂ ದಕ್ಷಿಣ ಭಾಗದ ಮತಗಟ್ಟೆಯ ಒಟ್ಟು 688(356 ಮಹಿಳೆಯರಲ್ಲಿ 294 ಮತದಾನ -ಶೇ.82.58) ಮತದಾರರಲ್ಲಿ 586 ಮಂದಿ(ಶೇ.85.17) ಮತ ಚಲಾಯಿಸಿ ದ್ದಾರೆ.

ಕಾರ್ಕಳ ಕ್ಷೇತ್ರದ ಪೆರ್ವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉತ್ತರ ಭಾಗದ ಮತಗಟ್ಟೆಯ ಒಟ್ಟು 1268(665 ಮಹಿಳೆರಲ್ಲಿ 509 ಮತದಾನ - ಶೇ.76.54) ಮತದಾರರಲ್ಲಿ 939 ಮಂದಿ(ಶೇ.74.05) ಹಾಗೂ ದಕ್ಷಿಣ ಭಾಗದ ಮತಗಟ್ಟೆಯ ಒಟ್ಟು 1063(553 ಮಹಿಳೆಯರಲ್ಲಿ 385 ಮತದಾನ -ಶೇ.75.05) ಮತದಾರರಲ್ಲಿ 800 ಮಂದಿ(ಶೇ.75.26) ಮತದಾನ ಮಾಡಿ ದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News