‘ಶುಭನುಡಿ’ ಕವನ ಸಂಕಲನ ಬಿಡುಗಡೆ
ಬ್ರಹ್ಮಾವರ, ಮೇ 13: ಯುವಜನತೆ ಸೇವಾ ಮನೋಭಾವನೆ ಮೈಗೂಡಿಸಿಕೊಂಡು ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಬೇಕು ಎಂದು ಹಾಸ್ಯ ಕಲಾವಿದ ಮನು ಹಂದಾಡಿ ಹೇಳಿದ್ದಾರೆ.
ಲೇಖಕ ಸಂತೋಷ ಮಕ್ಕಿಮನಿ ಅವರ ಚೊಚ್ಚಲ ಕವನ ಸಂಕಲನ ‘ಶುಭ ನುಡಿ’ಯನ್ನು ರವಿವಾರ ಹಂದಾಡಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಸಮಾಜ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ. ಅಪ್ರಾಮಾಣಿಕತೆಯಿಂದ ಇರುವವರು ಎಷ್ಟೇ ಹಣ ಗಳಿಸಿದರು ನೆಮ್ಮದಿಯಿಂದ ಬದುಕಲು ಆಗುವುದಿಲ್ಲ. ಮನುಷ್ಯ ಇಂದು ಹಣ ಗಳಿಕೆ ಸೀಮಿತವಾಗುವುದರ ಜೊತೆಗೆ ಸ್ವಾರ್ಥಿ ಆಗುತ್ತಿದ್ದಾನೆ ಎಂದರು.
ಪುಸ್ತಕವನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇತ್ತೀಚಿನ ದಿನದಲ್ಲಿ ಯುವ ಜನತೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಮೂಲ್ಯ ವಾದ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.
ಪುಸಕ್ತ ಮಾರಾಟದಿಂದ ಬರುವ ಸಂಪೂರ್ಣ ಲಾಭಾಂಶವನ್ನು ಕನ್ನಡ ಶಾಲೆ ಗಳಿಗೆ ನೀಡುವುದಾಗಿ ಲೇಖಕ ಸಂತೋಷ ಮಕ್ಕಿಮನಿ ಈ ಸಂದರ್ಭದಲ್ಲಿ ಘೋಷಿಸಿದರು. ಶಿಕ್ಷಕ ಶಶಿಕಾಂತ, ತ್ರಿಶೂಲ್, ಗ್ರಾಪಂ ಸದಸ್ಯ ಶ್ರೀನಿವಾಸ ಪೂಜಾರಿ, ಕಿರುತೆರೆ ಕಲಾವಿದ ಪ್ರಭಾಕರ್ ಕುಂದರ್ ಉಪಸ್ಥಿತರಿದ್ದರು.