ಅಡ್ಡೂರು: ನವೀಕೃತ ಮಸೀದಿ ಉದ್ಘಾಟನೆ

Update: 2018-05-14 11:35 GMT

ಅಡ್ಡೂರು, ಮೇ 14: ಇಲ್ಲಿನ ಮಂಜೊಟ್ಟಿಯಲ್ಲಿ ಮರ್ ಹೂಂ ಇಬ್ರಾಹೀಂ ಹಾಜಿ ಗರಡಿ ಸ್ಮರಣಾರ್ಥವಾಗಿ ನಿರ್ಮಿಸಿದ ನವೀಕೃತ ಇಬ್ರಾಹೀಂ ಮಸ್ಜಿದ್ ನ್ನು ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆ ಆಶೀರ್ವಚನ ನೀಡುವ ಮೂಲಕ ಸೋಮವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮಸೀದಿ ಅಲ್ಲಾಹನ ಭವನವಾಗಿದ್ದು, ಅದಕ್ಕೆ ಸಲ್ಲಬೇಕಾದ ಗೌರವಗಳನ್ನು ನಾವು ನೀಡಬೇಕು. ಮಸೀದಿಗಳು ಅಭಿವೃದ್ಧಿ ಗೊಂಡರೆ ಮಾತ್ರ ಧಾರ್ಮಿಕತೆಯ ಬೆಳವಣಿಗೆ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಶರೀಫ್ ದಾರಿಮಿ, ಯೂಸುಫ್ ಹಾಜಿ, ಆದಂ ಮುಸ್ಲಿಯಾರ್, ಜುಮಾ ಮಸೀದಿ ಅಧ್ಯಕ್ಷ ಟಿ.ಸೈಯದ್, ಮರ್ ಹೂಂ ಇಬ್ರಾಹೀಂ ಹಾಜಿ ಪುತ್ರರಾದ ಇಶಾಕ್, ಅಶ್ರಫ್, ಆಶಿಮ್, ನಾಸಿರ್, ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷ ಮನ್ಸೂರು ಮಣ್ಣಗುಡ್ಡೆ ಹಾಗೂ ಅಹ್ಮದ್ ಬಾವ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News