×
Ad

ಗೆಲ್ಲುವುದು ಮಾತ್ರವಲ್ಲ ಸೋಲುವುದನ್ನೂ ಕಲಿಸಿ: ನಾಗೇಶ್ ಕುಮಾರ್

Update: 2018-05-14 20:55 IST

ಮಣಿಪಾಲ, ಮೇ 14: ಮಕ್ಕಳಿಗೆ ಗೆಲ್ಲುವುದನ್ನು ಮಾತ್ರ ಕಲಿಸದೆ ಸೋಲು ವುದನ್ನು ಕೂಡ ಕಲಿಸಬೇಕು ಎಂದು ರಂಗಕರ್ಮಿ ಉದ್ಯಾವರ ನಾಗೇಶಕುಮಾರ್ ಹೇಳಿದ್ದಾರೆ. ಮಣಿಪಾಲ ಗ್ರೂಪ್ ಇತ್ತೀಚೆಗೆ ಮಣಿಪಾಲದಲ್ಲಿ ಆಯೋಜಿಸಿದ ಐದನೆ ವರ್ಷದ ಚೈತ್ರ-ಚಿತ್ತಾರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್ ಮಾತನಾಡಿ ಸಂಸ್ಕೃತಿ ಯೊಂದಿಗೆ ಶಿಕ್ಷಣಕ್ಕೆ ನಿಕಟ ಸಂಬಂಧವಿದೆ. ಈಗ ವ್ಯಾಪಾರೀ ಧೋರಣೆಯಿಂದ ಸಂಸ್ಕೃತಿಯ ಕಲ್ಪನೆಯೆ ಅಪಮೌಲ್ಯಗೊಂಡಿದೆ ಎಂದರು. ಎಂಐಎಂ ಪ್ರಾಧ್ಯಾಪಕ ಹರೀಶ ಜೋಶಿ, ನಿವೃತ್ತ ಪ್ರಾಂಶುಪಾಲ ಮೇಟಿ ಮುದಿಯಪ್ಪ, ಮಣಿಪಾಲ ಗ್ರೂಪ್‌ನ ಎಚ್.ಆರ್.ವಿಭಾಗದ ಪ್ರಕಾಶ ಪ್ರಭು ಉಪಸ್ಥಿತರಿದ್ದರು. ಶಿಬಿರ ನಿರ್ದೇಶಕ ಜಿ.ಪಿ.ಪ್ರಭಾಕರ ತುಮರಿ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.

ಉಷಾರಾಣಿ ಕಾಮತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಲೋಮಿ ವಂದಿಸಿದರು. ಈ ಶಿಬಿರದಲ್ಲಿ 30ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಭಾಗ ವಹಿಸಿದ್ದರು. ಶಿಬಿರಾರ್ಥಿಗಳಿಗಾಗಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News