×
Ad

ಶೋರಿನ್ ರಿಯೂ ಕರಾಟೆ ಸಾಧನೆ

Update: 2018-05-14 21:49 IST

ಮೂಡುಬಿದಿರೆ, ಮೇ.14: ಶ್ರೀಲಂಕಾದ ಕ್ಯಾಂಡಿಯ ಪೆರೆದೇನಿಯಾ ವಿ.ವಿ.ಯಲ್ಲಿ ಇತ್ತೀಚೆಗೆ ನಡೆದ 16 ನೇ ತೆನ್‌ಶಿನ್‌ಕಾನ್ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಶೋರಿನ್ ರಿಯೂ ಕರಾಟೆ ತಂಡವು 7 ಚಿನ್ನ, 7 ಬೆಳ್ಳಿ, 2 ಕಂಚಿನ ಪದಕಗಳೊಂದಿಗೆ ಅತ್ಯುತ್ತಮ ತಂಡ ಪ್ರಶಸ್ತಿ ಪಡೆಯಿತು.

 ಪ್ರಖ್ಯಾತ್ ಪೂಜಾರಿ 2 ಚಿನ್ನ, ಮಹಮ್ಮದ್ ಅಸ್ಪಕ್ 2 ಬೆಳ್ಳಿ, ಮಹಮ್ಮದ್ ಇಪಾಜ್ 1 ಚಿನ್ನ, 1 ಕಂಚು, ಶೇಕ್ ಮಹಮ್ಮದ್ ಝಿಯಾದ್ 1 ಚಿನ್ನ, 1 ಬೆಳ್ಳಿ, ಮಹಮ್ಮದ್ ಶಯಾನ್ 1 ಚಿನ್ನ, 1 ಬೆಳ್ಳಿ, ಮಹಮ್ಮದ್ ಅಮನ್ 1 ಚಿನ್ನ, 1 ಬೆಳ್ಳಿ, ಮಹಮ್ಮದ್ ಶಾರೀಪ್ 1 ಚಿನ್ನ, 1 ಕಂಚು, ಅಬ್ದುಲ್ ಖಾದರ್ ಸುಹಾನ್ 2 ಬೆಳ್ಳಿ ಪದಕಗಳನ್ನು ಪಡೆದರು.

ಇವರಿಗೆ ಶಿಹಾನ್ ನದೀಮ್ ಶ್ರೀಲಂಕಾಕ್ಕೆ ತೆರಳಿ ಮಾರ್ಗದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News