ಮಂಗಳೂರು: ಮತದಾನದಲ್ಲಿ ಮಹಿಳೆಯರೇ ಮುಂದು
ಮಂಗಳೂರು, ಮೇ 14: ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 8,41,073 ಪುರುಷ ಹಾಗೂ 8,70,775 ಮಹಿಳೆಯರು ಸೇರಿ ಒಟ್ಟು 17,11,848 ಮತದಾರರಿದ್ದು, ಈ ಪೈಕಿ 6,48,234 ಪುರುಷರು ಹಾಗೂ 6,81,335 ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಪುರುಷರಿಂಗಿಂತ 33,101 ಹೆಚ್ಚು ಮಹಿಳೆಯರು ಮತವನ್ನು ಚಲಾಯಿಸಿದಂತಾಗಿದೆ. ಮಹಿಳೆಯರು ಶೇ. 78.24 ಮತದಾನ ಮಾಡಿದ್ದರೆ. ಪುರುಷರ ಶೇಕಡಾವಾರು 77.67 ಆಗಿದೆ.ತಾಲೂಕುವಾರು ಮತದಾನವನ್ನು ಗಮನಿಸಿದರೆ, ಬೆಳ್ತಂಗಡಿ (ಪುರುಷರು-ಶೇ. 81.55, ಮಹಿಳೆ-ಶೇ.81.45) ಮತ್ತು ಸುಳ್ಯ (ಪುರುಷ-ಶೇ.84.29, ಮಹಿಳೆ-ಶೇ. 83.67) ಎರಡು ಕ್ಷೇತ್ರಗಳಲ್ಲಿ ಮಹಿಳೆಯರಿಗಿಂತ ಪುರುಷ ಮತದಾನದ ಸಂಖ್ಯೆ ಹೆಚ್ಚಾಗಿದೆ.
ಮೂಡಬಿದ್ರೆ (ಪುರುಷ-ಶೇ.74.92, ಮಹಿಳೆ-ಶೇ.76.93), ಮಂಗಳೂರು ಉತ್ತರ (ಪುರುಷ-ಶೇ.74.01, ಮಹಿಳೆ-ಶೇ.75.40), ಮಂಗಳೂರು ದಕ್ಷಿಣ (ಪುರುಷ-ಶೇ.66.87, ಮಹಿಳೆ -ಶೇ.68.00), ಮಂಗಳೂರು (ಪುರುಷ-ಶೇ.73.99, ಮಹಿಳೆ-ಶೇ.77.66), ಬಂಟ್ವಾಳ (ಪುರುಷ-ಶೇ.80.96, ಮಹಿಳೆ-ಶೇ.82.81) ಮತ್ತು ಪುತ್ತೂರು (ಪುರುಷ-ಶೇ.81.04, ಮಹಿಳೆ-ಶೇ.82.33) ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: 1,09,372 ಪುರುಷ ಮತದಾರರು ಹಾಗೂ 1,09,508 ಮಹಿಳಾ ಮತದಾರರು ಸೇರಿ ಒಟ್ಟು 2,18,880 ಮತದಾರರು. ಈ ಪೈಕಿ 89,195 ಪುರುಷ ಹಾಗೂ 89,192 ಮಹಿಳಾ ಮತದಾರರ ಸಹಿತ ಒಟ್ಟು 1,78,387 ಮತಗಳು ಚಲಾವಣೆಯಾಗಿವೆ.
ಮೂಡಬಿದ್ರೆ: ಪುರುಷ ಮತದಾರರು 96,733 ಹಾಗೂ ಮಹಿಳಾ ಮತದಾರರು 1,03,312 ಸಹಿತ ಒಟ್ಟು 2,00,045 ಮತದಾರರಲ್ಲಿ 72,469 ಪುರುಷರು ಹಾಗೂ 79,481 ಮಹಿಳೆಯರು ಮತದಾನ ಮಾಡಿದ್ದಾರೆ.ಮಂಗಳೂರು ಉತ್ತರ: 1,14,694 ಪುರುಷರು, 1,20,132 ಮಹಿಳಾ ಮತದಾರರು ಸೇರಿ ಒಟ್ಟು 2,34,826 ಮತದಾರರು. ಇದರಲ್ಲಿ 84,882 ಪುರುಷರು ಹಾಗೂ 90,574 ಮಹಿಳೆಯರು ಸಹಿತ ಒಟ್ಟು 1,75,456 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮಂಗಳೂರು ದಕ್ಷಿಣ: 1,15,017 ಪುರುಷ ಹಾಗೂ 1,25,040 ಮಹಿಳೆಯರ ಸಹಿತ ಒಟ್ಟು 2,40,057 ಮತದಾರರು. ಈ ಪೈಕಿ 76,913 ಪುರುಷರು ಹಾಗೂ 85,026 ಮಹಿಳೆಯರು ಸಹಿತ ಒಟ್ಟು 1,61,939 ಮಂದಿ ಮತ ಚಲಾಯಿಸಿದ್ದಾರೆ.
ಮಂಗಳೂರು: 96,186 ಪುರುಷರು ಹಾಗೂ 99,549 ಮಹಿಳೆಯರ ಸಹಿತ ಒಟ್ಟು 1,95,735 ಮತದಾರರು. ಇದರಲ್ಲಿ 71,167 ಪುರುಷರು ಹಾಗೂ 77,313 ಮಹಿಳೆಯರ ಸಹಿತ ಒಟ್ಟು 1,48,480 ಮಂದಿ ಮತ ಚಲಾವಣೆ ಮಾಡಿದ್ದಾರೆ.
ಬಂಟ್ವಾಳ: 1,09,537 ಪುರುಷರು ಹಾಗೂ 1,12,198 ಮಹಿಳೆಯರ ಸಹಿತ ಒಟ್ಟು 2,21,735 ಮತದಾರರು. 88,684 ಪುರುಷರು ಹಾಗೂ 92,906 ಮಹಿಳೆಯರ ಸಹಿತ ಒಟ್ಟು 1,81,590 ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ.
ಪುತ್ತೂರು: 1,00,619 ಪುರುಷರು, 1,01,265 ಮಹಿಳೆಯರು ಸಹಿತ ಒಟ್ಟು 2,01,884 ಮತದಾರರು. ಈ ಪೈಕಿ 81,544 ಪುರುಷರು ಹಾಗೂ 83,369 ಮಹಿಳೆಯರು ಸಹಿತ ಒಟ್ಟು 1,64,913 ಮತದಾರರು ಮತಗಳನ್ನು ಚಲಾಯಿಸಿದ್ದಾರೆ.
ಸುಳ್ಯ: 98,915 ಪುರುಷ ಹಾಗೂ 99,771 ಮಹಿಳೆಯರು ಸಹಿತ ಒಟ್ಟು 1,98,686 ಮತದಾರರು. 83,380 ಪುರುಷ ಹಾಗೂ 83,474 ಮಹಿಳಾ ಮತದಾರರ ಸಹಿತ ಒಟ್ಟು 1,66,854 ಮತದಾರರು ತಮ್ಮ ಮತ ಚಲಾವಣೆ ಮಾಡಿದ್ದಾರೆ.