×
Ad

ಸಿಇಒ ಮೂಸಾ ಫಾಝಿಲ್‌ಗೆ ಯುವ ಉದ್ಯಮಿ ಪ್ರಶಸ್ತಿ

Update: 2018-05-14 22:15 IST

ಮಂಗಳೂರು, ಮೇ.14: ಮಂಗಳೂರಿನ ಯುವ ಸಿಇಒ ಹಾಗೂ ಉದ್ಯಮಿ, ಫಾಝಿಲ್ಸ್ ಕ್ರಿಯೇಶನ್ಸ್‌ನ ಮುಖ್ಯ ಕಾರ್ಯಕಾರಿ ಅಧಿಕಾರಿ ಮೂಸಾ ಫಾಝಿಲ್ ಅವರಿಗೆ ಯುವ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಗೂಗಲ್ ಮತ್ತು ಫೇಸ್‌ಬುಕ್‌ನಿಂದ ಪ್ರಮಾಣೀಕರಣ ಗಳಿಸಿರುವ ಅತ್ಯಂತ ಕಿರಿಯ ಸಿಇಒ ಮತ್ತು ಉದ್ಯಮಿ ಹಾಗೂ ಅತ್ಯಂತ ಕಿರಿಯ ಮಂಗಳೂರಿಗ ಎಂಬ ಹಿನ್ನೆಲೆಯಲ್ಲಿ ಮೂಸಾ ಫಾಝಿಲ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಫಾಝಿಲ್ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಯಾಗಿದ್ದಾರೆ. ಅವರು ಫಾಝಿಲ್ ಕ್ರಿಯೇಶನ್ಸ್‌ನ ಸಿಇಒ ಕೂಡಾ ಆಗಿದ್ದಾರೆ. ಅವರಿಗೆ ಸೆಬ್‌ನಿಂದ ವಿಶೇಷ ಚಟುವಟಿಕೆಗಳಿಗಾಗಿ ಪ್ರಶಸ್ತಿ, ಉಎಫ್‌ಬಿಎಂನಿಂದ ಪ್ರಶಂಸಾ ಪತ್ರ, ಎಚ್‌ಐಎಫ್‌ನಿಂದ ಪ್ರಶಂಸಾ ಪತ್ರ, ಗೂಗಲ್ ಪ್ರಮಾಣೀಕರಣ, ಫೇಸ್‌ಬುಕ್ ಪ್ರಮಾಣೀಕರಣ, ನಿಖಪಾರ್ಟ್ನರ್.ಕಾಮ್‌ನಿಂದ ಶುಭಾಶಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭ್ಯವಾಗಿವೆ.

ಫಾಝಿಲ್, ಮುಹಮ್ಮದ್ ಸಲೀಂ ಹಾಗೂ ಅಮೀನಾ ದಂಪತಿಯ ಹಿರಿಯ ಪತ್ರನಾಗಿದ್ದಾರೆ. ಅಲ್ ಹಕ್ ಪ್ರತಿಷ್ಠಾನದ ಅಧ್ಯಕ್ಷ ಮುಹಮ್ಮದ್ ಇಮ್ತಿಯಾಝ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಖಜಾಂಚಿ ಅಬ್ದುಲ್ ಸಮದ್, ಎಸ್‌ಕೆಎಸ್‌ಎಂ ಮಾಧ್ಯಮ ಜಾಲದ ನಿರ್ದೇಶಕ ಶಿಹಬ್ ತಲಪಾಡಿ, ಮುಸ್ಲಿಂ ಕೇಂದ್ರ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಸಮಾರಂಭದ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News