ಶಿಕ್ಷಕರ ಕ್ಷೇತ್ರದ ಮತಪಟ್ಟಿ ಪರಿಷ್ಕರಣೆ
Update: 2018-05-14 23:28 IST
ಉಡುಪಿ, ಮೇ 14: ಕರ್ನಾಟಕ ವಿಧಾನಪರಿಷತ್‌ನ ನೈರುತ್ಯ ಪದವೀಧರರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತಿದ್ದು, ನಮೂನೆ 18 ಮತ್ತು 19ರ ಅರ್ಜಿಗಳನ್ನು ಸಲ್ಲಿಸಲು ಮೇ 15 ಕೊನೆಯ ದಿನವಾಗಿರುತ್ತದೆ.
ಆದ್ದರಿಂದ ನಮೂನೆ 18 ಮತ್ತು 19ರ ಅರ್ಜಿಗಳನ್ನು ಪ್ರಾದೇಶಿಕ ಆಯುಕ್ತರ ಕಚೇರಿ, ಮೈಸೂರು ವಿಭಾಗ, ಮೈಸೂರು ಇವರ ಕಚೇರಿಯಲ್ಲಿ ತೆರೆದಿರುವ ಕೌಂಟರ್‌ನಲ್ಲಿ ಮೇ 15ರಂದು ಮಾತ್ರ ಸಲ್ಲಿಸಲು ಕೌಂಟರ್‌ನ್ನು ತೆರೆಯಲಾಗುತ್ತದೆ. ಈ ಕೌಂಟರ್‌ನಲ್ಲಿ ನಮೂನೆ 18 ಮತ್ತು 19ರ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಮತದಾರರ ನೊಂದಣಾಧಿಕಾರಿಯವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.