ಮ್ಯಾಡ್ರಿಡ್ ಓಪನ್: ಝ್ವೆರೇವ್ ಚಾಂಪಿಯನ್

Update: 2018-05-14 18:40 GMT

ಮ್ಯಾಡ್ರಿಡ್ (ಸ್ಪೇನ್), ಮೇ.14: ಇಲ್ಲಿ ರವಿವಾರ ನಡೆದ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೇವ್ ಅವರು ಆಸ್ಟ್ರಿಯದ ಡೊಮಿನಿಕ್ ಥೀಮ್‌ರನ್ನು 6-4, 6-4 ಸೆಟ್‌ಗಳಿಂದ ಮಣಿಸಿ ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ. ಈ ಗೆಲುವಿನ ಮೂಲಕ ಝ್ವೆರೇವ್ ಮೂರು ಮಾಸ್ಟರ್ಸ್ 1000 ಪ್ರಶಸ್ತಿ ಗೆದ್ದಿರುವ ಐದನೇ ಅಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ರಪೇಲ್ ನಡಾಲ್, ರೋಜರ್ ಫೆಡರರ್, ನೊವಾಕ್ ಜೊಕೊವಿಕ್ ಮತ್ತು ಆ್ಯಂಡಿ ಮುರ್ರೆ ಈ ಸಾಧನೆಯನ್ನು ಮಾಡಿದ್ದರು. ಹುಮ್ಮಸ್ಸಿನಿಂದಲೇ ಆಟ ಪ್ರಾರಂಭಿಸಿದ ಝ್ವ್ವೆರೇವ್ ಎದುರಾಳಿ ಥೀಮ್‌ಗೆ ಮೊದಲ ಸುತ್ತಿನಲ್ಲೇ ಆಘಾತ ನೀಡುವ ಮೂಲಕ ಪಂದ್ಯದ ಮೇಲೆ ನಿಯಂತ್ರಣವನ್ನು ಸಾಧಿಸಿದರು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ರಫೇಲ್ ನಡಾಲ್‌ರನ್ನು ಸೋಲಿಸಿದ್ದ ಥೀಮ್ ಎರಡನೇ ಸುತ್ತಿನಲ್ಲಿ ಝ್ವೆರೇವ್ ಗೆ ಪೈಪೋಟಿ ನೀಡಲು ಮುಂದಾದರು.

ಆದರೆ ಥೀಮ್‌ನ ಯಾವ ಪ್ರಯತ್ನವೂ ಸಫಲವಾಗದಂತೆ ನೋಡಿಕೊಂಡ ಝ್ವೆರೇವ್ ಅಂತಿಮವಾಗಿ ಗೆಲುವಿನ ನಗು ಬೀರುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News