ಐಸಿಎಸ್ಇ ಪರೀಕ್ಷೆ: ಗ್ರೀನ್ ವ್ಯಾಲಿ ಶಾಲೆಗೆ ಶೇ. 100 ಫಲಿತಾಂಶ
ಶಿರೂರು, ಮೇ.15: ಐಸಿಎಸ್ಇ 10ನೆ ತರಗತಿ ಪರೀಕ್ಷೆಯಲ್ಲಿ ಗ್ರೀನ್ ವ್ಯಾಲಿ ರಾಷ್ಟ್ರೀಯ ಶಾಲೆ ಮತ್ತು ಪಿಯು ಕಾಲೇಜ್ ಸತತ 11ನೇ ಬಾರಿ ಶೇ. 100 ಫಲಿತಾಂಶವನ್ನು ಪಡೆದುಕೊಂಡಿದೆ. ಇಲ್ಲಿನ ವಿದ್ಯಾರ್ಥಿಗಳು ಐಸಿಎಸ್ಇ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆಯ ಪ್ರದರ್ಶನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಇಲ್ಲಿನ 63 ವಿದ್ಯಾರ್ಥಿಗಳ ಪೈಕಿ ಎಲ್ಲ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲೂ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. 20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದರೆ 43 ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಮರಿಯಮ್ ಇನಯತುಲ್ಲಾ 472 (94.4%) ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದಾರೆ. ಸುಹೈಲ್ ಅಹ್ಮದ್ ಅನ್ವರ್ 470 (94%) ಮತ್ತು ಮುಹಮ್ಮದ್ ಸಾವುದ್ 466 (93.2%) ಅಂಕಗಳೊಂದಿಗೆ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.