ಗುರುವಾರ ರಮಝಾನ್ ಪ್ರಾರಂಭ
Update: 2018-05-15 20:43 IST
ಮಂಗಳೂರು, ಮೇ 15: ರಮಝಾನ್ ತಿಂಗಳ ಚಂದ್ರದರ್ಶನವಾದ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲದಿರುವುದರಿಂದ ಮೇ 16 ( ಬುಧವಾರ) ಶಾಬಾನ್ 30 ಆಗಿದೆ. ಆದುದರಿಂದ ಗುರುವಾರದಿಂದ ರಮಝಾನ್ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ಅವರು ತಿಳಿಸಿದ್ದಾರೆ ಎಂದು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.