ಇವಿಎಂ ಬಗ್ಗೆ ಅನುಮಾನ: ಮೊಯ್ದಿನ್ ಬಾವ
Update: 2018-05-15 20:56 IST
ಮಂಗಳೂರು, ಮೇ 15: ಕ್ಷೇತ್ರದಲ್ಲಿ ಆಗಿರುವ ಮತ ಚಲಾವಣೆಯನ್ನು ಗಮನಿಸಿದಾಗ ಕೆಲವು ಬೂತ್ ಮಟ್ಟದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಪರವಾಗಿ ಮತ ಚಲಾವಣೆಯಾಗಬೇಕಿತ್ತು. ಆದರೆ, ಮತ ಎಣಿಕೆಯ ಸಂದರ್ಭ ವ್ಯತಿರಿಕ್ತವಾದ ಫಲಿತಾಂಶ ಹೊರಬಂದಿದೆ.
ಈ ಬಾರಿಯ ಹೊಸ ಮತದಾರರು ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಚಲಾವಣೆಯಾಗಿರುವ ಮತಗಳನ್ನು ಗಮನಿಸುವಾಗ ಇವಿಎಂನ ಬಗ್ಗೆ ಅನುಮಾನ ಸಹಜವಾಗಿ ಸೃಷ್ಟಿಯಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಮೊಯ್ದಿನ್ ಬಾವ ತಿಳಿಸಿದ್ದಾರೆ.
‘ಇವಿಎಂ ದುರುಪಯೋಗ ಆಗಿರುವ ಬಗ್ಗೆ ಸಂಶಯವಿದೆ’ ಎಂದು ಆಕ್ಷೇಪ ದಾಖಲಿಸಲಾಗಿದೆ. ಬುಧವಾರ ಜಿಲ್ಲಾ ಚುನಾವಣಾಧಿಕಾರಿಗೆ ವಿವರವಾದ ದೂರು ಸಲ್ಲಿಸಲು ನಿರ್ಧರಿಸಿದ್ದೇವೆ ಎಂದೂ ಅವರು ಮಾಹಿತಿ ನೀಡಿದರು.