×
Ad

ಲೋಕಪಾಲ್ ಸಮಿತಿಗೆ ಉನ್ನತ ನ್ಯಾಯಶಾಸ್ತ್ರಜ್ಞರಾಗಿ ಮುಕುಲ್ ರೋಹ್ಟಗಿ ಆಯ್ಕೆ

Update: 2018-05-15 22:17 IST

ಹೊಸದಿಲ್ಲಿ, ಮೇ 15: ಲೋಕಪಾಲರನ್ನು ನಿಯೋಜಿಸುವ ಸಮಿತಿಗೆ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರನ್ನು ಉನ್ನತ ನ್ಯಾಯಶಾಸ್ತ್ರಜ್ಞರಾಗಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರಕಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಪ್ರಧಾನಿ ಅವರು ಅಧ್ಯಕ್ಷರಾಗಿರುವ ಆಯ್ಕೆ ಸಮಿತಿಗೆ ಉನ್ನತ ನ್ಯಾಯಶಾಸ್ತ್ರಜ್ಞರಾಗಿ ರೋಹ್ಟಗಿ ಅವರನ್ನು ನೇಮಕ ಮಾಡಲು ಮೇ 11ರಂದು ನಿರ್ಧಾರ ತೆಗೆದುಕ್ಳೊಲಾಗಿತ್ತು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ಪೀಠಕ್ಕೆ ತಿಳಿಸಿದೆ. 2014ರಲ್ಲಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ರೋಹ್ಟಗಿ ಅವರನ್ನು ಭಾರತದ ಅಟಾರ್ನಿ ಜನರಲ್ ಆಗಿ ನೇಮಕ ಮಾಡಲಾಗಿತ್ತು. 2017 ಜೂನ್‌ನಲ್ಲಿ ಅವರು ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಹಿರಿಯ ನ್ಯಾಯವಾದಿ ಪಿ.ಪಿ. ರಾವ್ 2017 ಸೆಪ್ಟಂಬರ್ 11ರಂದು ನಿಧನರಾದ ಬಳಿಕ ಲೋಕಪಾಲ್ ಆಯ್ಕೆ ಸಮಿತಿಯ ಉನ್ನತ ನ್ಯಾಯಶಾಸ್ತ್ರಜ್ಞರಾಗಿ ಹುದ್ದೆ ಖಾಲಿ ಬಿದ್ದಿತ್ತು. ಪ್ರತಿಪಾದನೆ ಆಲಿಸಿದ ಪೀಠ, ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿದೆ. ಕಳೆದ ವರ್ಷ ಎಪ್ರಿಲ್ 27ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದ ಹೊರತಾಗಿಯೂ ಲೋಕಪಾಲ್ ಆಯ್ಕೆ ಮಾಡದಿರುವುದನ್ನು ಪ್ರಶ್ನಿಸಿ ಸರಕಾರೇತರ ಸಂಸ್ಥೆ ಕಾಮನ್ ಕಾಸ್ ಸಲ್ಲಿಸಿದ ನ್ಯಾಯಾಂಗ ನಿಂದನೆ ದೂರನ್ನು ಪೀಠ ವಿಚಾರಣೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News