×
Ad

ಸೋಲಾರ್ ಹಗರಣ : ಊಮ್ಮನ್ ಚಾಂಡಿಗೆ ಮುಕ್ತಿ ನೀಡಿದ ಉಚ್ಚ ನ್ಯಾಯಾಲಯ

Update: 2018-05-15 22:28 IST

ತಿರುವನಂತಪುರ, ಮೇ 15: ಸೋಲಾರ್ ಹಗರಣದಲ್ಲಿ ಕೊನೆಗೂ ಕೇರಳದ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಅವರನ್ನು ಕೇರಳ ಉಚ್ಚ ನ್ಯಾಯಾಲಯ ದೋಷಮುಕ್ತಿಗೊಳಿಸಿದೆ. ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಸೋಲಾರ್ ಹಗರಣದ ಪ್ರಮಖ ಆರೋಪಿ ಸರಿತಾ ನಾಯರ್ ಬರೆದೆ ಪತ್ರದ ಆಧಾರದಲ್ಲಿ ಹಗರಣಕ್ಕೆ ಸಂಬಂಧಿಸಿ ಆಯೋಗ ನಡೆಸಿರುವ ತನಿಖೆ ಹಾಗೂ ಹೇಳಿಕೆಯನ್ನು ಉಚ್ಚ ನ್ಯಾಯಾಲಯ ಮಂಗಳವಾರ ವಜಾ ಮಾಡಿದೆ.

ನಾಯರ್ ಅವರ ಲೈಂಗಿಕ ಕಿರುಕುಳದ ಆರೋಪ ಜಸ್ಟಿಸ್ ಜಿ. ಶಿವರಾಜನ್ ಆಯೋಗದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಉಚ್ಚ ನ್ಯಾಯಾಲ ಹೇಳಿದೆ. ಆದಾಗ್ಯೂ, ಚಾಂಡಿ ಅವರ ಕೋರಿಕೆಯಂತೆ ಆಯೋಗದ ವರದಿಯನ್ನು ಒಟ್ಟಾಗಿ ಅಸಿಂಧುಗೊಳಿಸಲು ಉಚ್ಚ ನ್ಯಾಯಾಲಯ ನಿರಾಕರಿಸಿತು. ನ್ಯಾಯಾಲಯದ ತೀರ್ಪಿನ ಬಳಿಕ ಕಾಂಗ್ರೆಸ್ ನಾಯಕನ ವಿರುದ್ಧ ರಾಜ್ಯ ಸರಕಾರ ಯಾವುದೇ ಪ್ರಕರಣ ದಾಖಲಿಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News