×
Ad

ಉಡುಪಿಯಲ್ಲಿ ಮೋದಿ ಪ್ರಚಾರವೂ ರಘುಪತಿ ಭಟ್ ಗೆಲುವೂ !

Update: 2018-05-15 22:44 IST

ಉಡುಪಿ, ಮೇ 15: ಉಡುಪಿ ಶಾಸಕರಾಗಿ ರಘುಪತಿ ಭಟ್ ಮೂರನೆ ಬಾರಿಗೆ ಗೆಲವು ಸಾಧಿಸಿದ್ದಾರೆ. ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಬಂದಾಗಲೆಲ್ಲ ರಘುಪತಿ ಭಟ್ ಜಯ ಗಳಿಸಿರುವುದು ವಿಶೇಷ.

2004ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ ರಘುಪತಿ ಭಟ್ ಪರ ಚುನಾವಣಾ ಪ್ರಚಾರ ನಡೆಸಲು ಆಗ ಗುಜರಾತ್ ಮುಖ್ಯಮಂತ್ರಿಯಾ ಗಿದ್ದ ನರೇಂದ್ರ ಮೋದಿ ಉಡುಪಿಗೆ ಆಗಮಿಸಿದ್ದರು. ಆ ಚುನಾವಣೆಯಲ್ಲಿ ರಘುಪತಿ ಭಟ್ ಜಯ ಸಾಧಿಸಿದ್ದರು. ಅದೇ ರೀತಿ 2008ರ ಚುನಾವಣೆ ಯಲ್ಲೂ ನರೇಂದ್ರ ಮೋದಿ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದ್ದರು. ಅದರಲ್ಲೂ ರಘುಪತಿ ಭಟ್ ಅವರೇ ಗೆದ್ದಿದ್ದರು.

 2013ರಲ್ಲಿ ರಘುಪತಿ ಭಟ್ ಇತರ ಕಾರಣಗಳಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆ ಸಮಯದಲ್ಲಿ ಮೋದಿ ಕೂಡ ಉಡುಪಿಗೆ ಬಂದಿರಲಿಲ್ಲ. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಸುಧಾಕರ್ ಶೆಟ್ಟಿ ಸೋಲು ಕಂಡಿದ್ದರು. ಇದೀಗ 2018ರ ಚುನಾವಣೆಯ ಸಂದರ್ಭ ಮೋದಿ ಉಡುಪಿಗೆ ಆಗಮಿಸಿ ಪ್ರಚಾರ ಕಾರ್ಯ ನಡೆಸಿದ್ದರು. ಇದರಲ್ಲೂ ರಘುಪತಿ ಭಟ್ ಮೂರನೆ ಗೆಲವು ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News