×
Ad

ಕೊನೆಯವರೆಗೂ ಮತಎಣಿಕೆ ಕೇಂದ್ರದಲ್ಲೇ ಉಳಿದ ಸೊರಕೆ

Update: 2018-05-15 22:52 IST

ಉಡುಪಿ, ಮೇ 15: ಗೆಲ್ಲುವ ವಿಶ್ವಾಸದಿಂದ ಆರಂಭದಲ್ಲೇ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮತ ಎಣಿಕೆ ಮುಗಿದು ಸೋಲು ಕಂಡರೂ ಕೊನೆಯವರೆಗೆ ಕೇಂದ್ರದಲ್ಲೇ ಉಳಿದು ಕೊಂಡಿದ್ದರು.

ಬೆಳಗ್ಗೆ 7ಗಂಟೆಗೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ವಿನಯ ಕುಮಾರ್ ಸೊರಕೆ ಸೋಲು ಖಚಿತವಾದರೂ ಇತರರಂತೆ ಅರ್ಧದಲ್ಲೇ ನಿರ್ಗಮಿಸದೇ, ಕೊನೆಯವರೆಗೂ ಕೇಂದ್ರದಲ್ಲೇ ಇದ್ದರು. ಮತ ಎಣಿಕೆ ಮುಗಿದ ನಂತರವೂ ಕೇಂದ್ರದ ಒಳಗೆ ಮಂಕಾಗಿದ್ದ ಸೊರಕೆ, ಕೊನೆಗೆ ಕೇಂದ್ರದಿಂದ ಹೊರ ಬಂದರು. ಹೊರಗೆ ಕಾಯುತ್ತಾ ನಿಂತಿದ್ದ ಮಾಧ್ಯಮವರಿಗೂ ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ತೆರಳಿದರು.

ಕೇಂದ್ರದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಅವರ ವಾಹನ ಇದ್ದರೂ ಅದನ್ನು ಏರದೆ ಮಣಿಪಾಲ- ಉಡುಪಿ ಮುಖ್ಯರಸ್ತೆಯವರೆಗೂ ನಡೆದುಕೊಂಡೆ ಸಾಗಿದರು. ಈ ಮಧ್ಯೆ ಇತರ ಮುಖಂಡರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಸೊರಕೆಯವರನ್ನು ಉದ್ದೇಶಿಸಿ ದಾರಿಯುದ್ದಕ್ಕೂ ನೆರೆದಿದ್ದ ಬಿಜೆಪಿ ಕಾರ್ಯ ಕರ್ತರು ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗಿದರು. ಬೃಹತ್ ಕೇಸರಿ ಧ್ವಜ ಹಿಡಿದುಕೊಂಡ ಕಾರ್ಯಕರ್ತನೊಬ್ಬ ಸೊರಕೆ ದಾರಿಗೆ ಅಡ್ಡ ಬಂದು ಘೋಷಣೆ ಕೂಗಿದ. ಆದರೂ ಸೊರಕೆ ಇದನ್ನೆಲ್ಲ ಲೆಕ್ಕಿಸದೆ ಮುಖ್ಯ ರಸ್ತೆವರೆಗೆ ನಡೆದುಕೊಂಡು ಹೋಗಿ ಮತ್ತೆ ಕಾರನ್ನು ಏರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News