ಬಸ್ಸಿನಡಿಗೆ ಬಿದ್ದು ಪ್ರಯಾಣಿಕ ಮೃತ್ಯು
Update: 2018-05-16 00:05 IST
ಕುಂದಾಪುರ, ಮೇ 15: ಪ್ರಯಾಣಿಕರೊಬ್ಬರು ಅಕಸ್ಮಿಕವಾಗಿ ಬಸ್ಸಿನಡಿಗೆ ಬಿದ್ದು ಮೃತಪಟ್ಟ ಘಟನೆ ಮೇ 14ರಂದು ರಾತ್ರಿ 8ಗಂಟೆ ಸುಮಾರಿಗೆ ಕುಂಭಾಶಿ ಗ್ರಾಮದ ಸೇವಾ ಸಂಗಮ ವಿದ್ಯಾಕೇಂದ್ರದ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಗೋವಿಂದ ಎಂದು ಗುರುತಿಸಲಾಗಿದೆ. ಕುಂದಾಪುರ ಕಡೆಯಿಂದ ಕೋಟ ಕಡೆಗೆ ಹೋಗುತ್ತಿದ್ದ ಬಸ್ಸು, ಪ್ರಯಾಣಿಕರನ್ನು ಇಳಿಸಲು ಕುಂಭಾಶಿ ಬಳಿ ನಿಲ್ಲಿಸಿತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕ ಗೋವಿಂದ ಬಸ್ಸಿನ ಎದುರಿನ ಬಾಗಿಲಿ ನಿಂದ ಇಳಿಯುತ್ತಿದ್ದಾಗ ಚಾಲಕ ಬಸ್ಸನ್ನು ಒಮ್ಮೇಲೆ ಮುಂದಕ್ಕೆ ಚಲಾಯಿಸಿದರು.
ಇದರ ಪರಿಣಾಮ ಬಸ್‌ನಿಂದ ಕೆಳಗೆ ರಸ್ತೆಗೆ ಬಿದ್ದ ಗೋವಿಂದ ಅವರ ತಲೆ ಬಸ್ಸಿನ ಹಿಂಬದಿ ಟಯರ್ಗೆ ಸಿಲುಕಿತು. ಇದರಿಂದ ಗಂಭೀರವಾಗಿ ಗಾಯ ಗೊಂಡು ಅವರು ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.