ಡಾಲರ್ ಎದುರು ತೀವ್ರ ಕುಸಿತ ಕಂಡ ರೂಪಾಯಿ ಮೌಲ್ಯ

Update: 2018-05-16 06:45 GMT

ಹೊಸದಿಲ್ಲಿ,ಮೇ.16 : ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 68 ಪೈಸೆಗಿಂತ ಕೆಳಗೆ ಕುಸಿದಿದ್ದು ಇದು ಜನವರಿ 2017ರಿಂದೀಚೆಗೆ ಕಂಡ ಗರಿಷ್ಠ ಕುಸಿತವಾಗಿದೆ.  ಮಂಗಳವಾರ ದಿನವಿಡೀ ರೂಪಾಯಿ ಮೌಲ್ಯ ಏರಿಳಿತ  ಕಂಡಿದೆ.

ಸೋಮವಾರ ಡಾಲರ್ ಎದುರು ರೂಪಾಯಿ  ಮೌಲ್ಯ 67.52ಕ್ಕೆ ಅಂತ್ಯವಾಗಿದ್ದರೆ ಮಂಗಳವಾರ 68.11ಕ್ಕೆ ಅಂತ್ಯವಾಗಿದೆ. ರೂಪಾಯಿ ಮೌಲ್ಯ ಕುಸಿತ ಕಾಣಲು ಕರ್ನಾಟಕ ಚುನಾವಣೆ ಒಂದು ಕಾರಣವಾದರೆ, ಏರುತ್ತಿರುವ ತೈಲ ಬೆಲೆ,   ಹೆಚ್ಚುತ್ತಿರುವ ತೈಲ ಆಮದು ಬಿಲ್ ಕೂಡ ಕಾರಣವೆಂದು ಎಚ್‍ಎಸ್‍ಬಿಸಿ ವರದಿ ತಿಳಿಸಿದೆ.

ಈ ವರ್ಷದ ಆರಂಭದಿಂದ ಡಾಲರ್ ಎದುರು ರೂಪಾಯಿ ಮೌಲ್ಯ 6.22ರಷ್ಟು ಕುಸಿದಿದೆ. ಕಳೆದ ವರ್ಷ ಈ ಕುಸಿತ  ಶೇ 6 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News