ರಾಷ್ಟ್ರಪತಿ ಭವನದಲ್ಲೂ ಲೈಂಗಿಕ ಕಿರುಕುಳ ಪ್ರಕರಣ !

Update: 2018-05-16 08:29 GMT

ಲಕ್ನೋ,ಮೇ.16 : ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ನಿಯಂತ್ರಣ ಕಾಯಿದೆ, 2013ರಲ್ಲಿ ಜಾರಿಯಾದಂದಿನಿಂದ ರಾಷ್ಟ್ರಪತಿ ಭವನದಲ್ಲಿ ಎರಡು ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿ ಅವುಗಳ ಬಗ್ಗೆ ತನಿಖೆ ಕೂಡ ನಡೆದಿವೆ, ಒಂದು ದೂರು ಸುಳ್ಳು ಎಂದು ಸಾಬೀತಾಗಿದ್ದರೆ ಇನ್ನೊಂದು ಪ್ರಕರಣದಲ್ಲಿ ಸಂಬಂಧಿತ ಉದ್ಯೋಗಿ  ತಪ್ಪಿತಸ್ಥ ಎಂದು ತಿಳಿದು ಬಂದಿದೆ ಎಂದು ಸಾಮಾಜಿಕ ಕಾರ್ಯಕರ್ತೆ ನೂತನ್ ಠಾಕುರ್ ಅವರು ಸಲ್ಲಿಸಿದ್ದ ಆರ್‍ಟಿಐ ಅರ್ಜಿಯೊಂದಕ್ಕೆ  ರಾಷ್ಟ್ರಪತಿ ಭವನದ ಸೆಕ್ರಟೇರಿಯಟ್ ಉತ್ತರ ನೀಡಿದೆ.

ಮೇ 9, 2018ರಂದು  ರಾಷ್ಟ್ರಪತಿ ಭವನದ ಉಪ ಕಾರ್ಯದರ್ಶಿ ಜೆ ಜಿ ಸುಬ್ರಹ್ಮಣ್ಯನ್ ಅವರು ತಮ್ಮ ಉತ್ತರದಲ್ಲಿ ಎರಡೂ ಪ್ರಕರಣಕ್ಕೆ ಸಂಬಂಧಿಸಿದ ಹೆಸರುಗಳು ಮತ್ತಿತರ ಮಾಹಿತಿಗಳನ್ನು ಹೊರಗೆಡಹಿಲ್ಲ. ಕಾನೂನು ಕೂಡ ಅದಕ್ಕೆ ಅನುಮತಿಸುವುದಿಲ್ಲ.

ಕಾಯಿದೆ ಜಾರಿಯಾದಂದಿನಿಂದ ರಾಷ್ಟ್ರಪತಿ ಭವನದಲ್ಲಿ ಎಷ್ಟು ದೂರುಗಳು ದಾಖಲಾಗಿವೆ ಹಾಗೂ ಅವುಗಳ ಬಗೆಗಿನ ವಿಚಾರಣೆಯ ಫಲಿತಾಂಶವೇನು ಎಂದು ನೂತನ್ ತಮ್ಮ ಆರ್‍ಟಿಐ ಅರ್ಜಿಯಲ್ಲಿ ಮಾಹಿತಿ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News