ಪಿಯು ಫಲಿತಾಂಶ: ಅಶ್ಲಿನ್ ಕ್ರಿಸ್ ಫೆರ್ನಾಂಡಿಸ್ ಗೆ ಶೇ.95.83 ಅಂಕ

Update: 2018-05-16 12:41 GMT

ಮಂಗಳೂರು, ಮೇ 16: ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿ ಅಶ್ಲಿನ್ ಕ್ರಿಸ್ ಫೆರ್ನಾಂಡಿಸ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.95.83 ಫಲಿತಾಂಶ ದಾಖಲಿಸಿದ್ದಾರೆ.

ಇವರು ಇಂಗ್ಲಿಷ್‌ನಲ್ಲಿ 89, ಹಿಂದಿಯಲ್ಲಿ 98, ಬಿಸಿನೆಸ್ ಸ್ಟಡೀಸ್‌ನಲ್ಲಿ 95, ಲೆಕ್ಕಶಾಸ್ತ್ರದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 98, ಕಂಪ್ಯೂಟರ್ ಸೈಯನ್ಸ್‌ನಲ್ಲಿ 95 ಅಂಕ ಪಡೆದಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಮೇರಮಜಲು ನಿವಾಸಿ ಆಲ್ವಿನ್ ಫೆರ್ನಾಂಡಿಸ್-ಕ್ಲಾರಾ ಫೆರ್ನಾಂಡಿಸ್ ದಂಪತಿಯ ಪುತ್ರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News