ನಿಧನ : ಹವ್ವಾ ಬಿಂತಿ ಅಬೂಬಕರ್

Update: 2018-05-16 16:04 GMT

ಮಂಗಳೂರು, ಮೇ 16: ಮೂಡಿಗೆರೆ ಸಮೀಪದ ಬಣಕಲ್ ನಿವಾಸಿ ದಿ. ಮುಹಮ್ಮದ್ ಸೂಫಿ ಅವರ ಪತ್ನಿ ಹವ್ವಾ ಬಿಂತಿ ಅಬೂಬಕರ್ ಅವರು ಬುಧವಾರ ಸಂಜೆ ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರು ಸಮೀಪದ ಕೈಕಂಬದಲ್ಲಿರುವ ತಮ್ಮ ಪುತ್ರನ ನಿವಾಸದಲ್ಲಿ ನಿಧನರಾದರು.

ಅವರಿಗೆ (77) ವರ್ಷ ವಯಸ್ಸಾಗಿತ್ತು.

ಮೂಲತಃ ದ.ಕ. ಜಿಲ್ಲೆಯ ಉಪ್ಪಿನಂಗಡಿಯವರಾದ ಹವ್ವಾ ಮುಸ್ಲಿಂ ಹುಡುಗಿಯರು ಶಾಲಾ ಕಾಲೇಜಿಗೆ ಹೋಗುವುದೇ ಸಾಧ್ಯವಿಲ್ಲದಿದ್ದ ಆ ದಿನಗಳಲ್ಲಿ ಅವರ ಊರಲ್ಲಿ ಹೈ ಸ್ಕೂಲ್ ಶಿಕ್ಷಣ ಪಡೆದ ಪ್ರಪ್ರಥಮ ಮುಸ್ಲಿಮ್ ಹೆಣ್ಣುಮಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಹವ್ವಾ ಬಿಂತ್‌ ಅಬೂಬಕರ್ ಮಲಯಾಳಂ, ಉರ್ದು, ಕನ್ನಡ ಭಾಷೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದು, ಬಾಲ್ಯದಲ್ಲೇ ತಮ್ಮ ಸ್ವ ಆಸಕ್ತಿಯಿಂದ ಅರೆಬಿಕ್ ಭಾಷೆಯನ್ನು ಕಲಿತವರು. ಆ ನಾಲ್ಕು ಭಾಷೆಗಳಲ್ಲಿ ಸಿಗುವ ಇಸ್ಲಾಮಿ ಸಾಹಿತ್ಯವನ್ನು ಹವ್ವಾ ಬಿಂತಿ ಅಬೂಬಕರ್ ಅತ್ಯಂತ ಆಸಕ್ತಿಯಿಂದ ಓದುತ್ತಿದ್ದರು. ತಾವು ಕಲಿತ ವಿಷಯಗಳನ್ನು ಇತರರಿಗೂ ಹೇಳಿ ಕೊಡುತ್ತಿದ್ದರು.  ಇಸ್ಲಾಮಿ ಸಾಹಿತ್ಯವನ್ನು ಹೆಚ್ಚು ಹೆಚ್ಚು ಜನರಿಗೆ ಪರಿಚಯಿಸಿದ ಅವರ ಸೇವೆಗಾಗಿ ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯು ತನ್ನ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿತ್ತು.

ಮೃತರು ಕುವೈತ್ ನಲ್ಲಿರುವ ಅನಿವಾಸಿ ಭಾರತೀಯ ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಸೂಫಿ, ಲೇಖಕ ಸರ್ಫುದ್ದೀನ್ ಸೂಫಿ ಸಹಿತ ಆರು ಮಂದಿ ಪುತ್ರರು ಹಾಗು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅವರ ಅಂತಿಮ ಸಂಸ್ಕಾರವು ಗುರುವಾರ ಉಪ್ಪಿನಂಗಡಿಯ ಹುದಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News