ಮೇ 19ರಂದು ಶ್ರೀಪ್ರದ ರಾವ್ ರಂಗಪ್ರವೇಶ
Update: 2018-05-17 19:25 IST
ಉಡುಪಿ, ಮೇ 17: ಕುಕ್ಕಿಕಟ್ಟೆ ರಾಧಾಕೃಷ್ಣ ನೃತ್ಯನಿಕೇತನ ಸಂಸ್ಥೆಯ ನಾಟ್ಯ ವಿದ್ಯಾರ್ಥಿನಿ, ಕನ್ನರ್ಪಾಡಿ ಸತೀಶ ರಾವ್ ಮತ್ತು ಮನೋರಮಾ ರಾವ್ ದಂಪತಿ ಪುತ್ರಿ ವಿದುಷಿ ಶ್ರೀಪ್ರದ ರಾವ್ ಅವರ ರಂಗಪ್ರವೇಶ ಮೇ 19ರಂದು ಸಂಜೆ 6:45ಕ್ಕೆ ಉಡುಪಿ ಶ್ರೀಕೃಷ್ಣಮಠ ರಾಜಾಂಗಣದಲ್ಲಿ ನಡೆಯಲಿದೆ.
ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ವಿದ್ವಾನ್ ಪಂಜ ಭಾಸ್ಕರ ಭಟ್ ಅಧ್ಯಕ್ಷತೆ ವಹಿಸಲಿರುವರು. ಮಾಜಿ ಲಯನ್ಸ್ ಗವರ್ನರ್ ಡಾ.ರವೀಂದ್ರನಾಥ ಶೆಟ್ಟಿ, ಉಗಾಂಡದ ಇಂಡಿ ಯನ್ ಟ್ರೆಡಿಷನಲ್ ಆರ್ಟ್ ಸಂಸ್ಥಾಪಕಿ ರೇಖಾ ರಾಘವೇಂದ್ರನ್, ನಿಟ್ಟೆ ಕಾಲೇಜು ಪ್ರಾಂಶುಪಾಲೆ ಡಾ.ವೀಣಾ ಭಟ್ ಮುಖ್ಯ ಅತಿಥಿಗಳಾಗಿರುವರು. ಬಳಿಕ ಶ್ರೀಪ್ರದ ಅವರ ನೃತ್ಯ ಪ್ರದರ್ಶನವಿದೆ ಎಂದು ಪ್ರಕಟಣೆ ತಿಳಿಸಿದೆ.