×
Ad

ಯೆನೆಪೊಯ ನರ್ಸಿಂಗ್ ಕಾಲೇಜು: ಅಂತಾರಾಷ್ಟ್ರೀಯ ಶುಶ್ರೂಷಕರ ದಿನ

Update: 2018-05-17 19:27 IST

ಕೊಣಾಜೆ, ಮೇ 17: ಅಂತಾರಾಷ್ಟ್ರೀಯ ಶುಶ್ರೂಷಕರ ದಿನವನ್ನು ಯೆನೆಪೋಯ ವಿಶ್ವವಿದ್ಯಾನಿಲಯದಲ್ಲಿ ಯೆನೆಪೋಯ ನರ್ಸಿಂಗ್ ಕಾಲೇಜು ಮತ್ತು ಯೆನೆಪೊಯ ವೈದ್ಯಕೀಯ ಆಸ್ಪತ್ರೆಯ ಶುಶ್ರೂಷಕರ ವಿಭಾಗದ ಜಂಟಿ ಆಶ್ರಯದಲ್ಲಿ ಎಂಡ್ಯೂರೆನ್ಸ್ ಝೋನ್ ನಲ್ಲಿ ನಡೆಸಲಾಯಿತು.

ವಿಶ್ವವಿದ್ಯಾಲಯದ ಕುಲಸಚಿವ, ಡಾ. ಶ್ರೀಕುಮಾರ್ ಮೆನನ್ ಅಧ್ಯಕ್ಷೀಯ ಭಾಷಣ ಮಾಡಿದರು. ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಡಾ. ಲೀನಾ ಕೆ ಸಿ  ದಿನದ ಮಹತ್ವವನ್ನು ವಿವರಿಸಿದರು. ಯೆನೆಪೊಯ ವೈದ್ಯಕೀಯ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮೊಹಮ್ಮದ್ ಅಮಿನ್ ವಾನಿ ಆಸ್ಪತ್ರೆಯಲ್ಲಿ ಶುಶ್ರೂಷರ ಮಹತ್ವದ ಕುರಿತು ಮಾತನಾಡಿದರು.  ರೆನಿಟಾ ಪ್ರಿಯ ಡಿಸೋಜ  ಸ್ವಾಗತಿಸಿದರು.  ಯೆನೆಪೊಯ ಆಸ್ಪತ್ರೆಯ ಮುಖ್ಯ ಶುಶ್ರೂಷಾ ಅಧಿಕಾರಿ ಭಗಿನಿ. ಐಲೀನ್ ಮಥಾಯಿಸ್ ವಂದಿಸಿದರು.

ಶುಶ್ರೂಷಕರ ತರಬೇತಿ ಪಡೆಯುವ ವಿದ್ಯಾರ್ಥಿಗಳು ರೋಗಿಗಳ ಸೇವೆಯನ್ನು ಹೇಗೆ ಕಲಿಕೆಯಲ್ಲಿ ಸದುಪಯೋಗ ಪಡಿಸುವುದು ಎಂಬ ವಿಚಾರದ ಕುರಿತು ವಿಚಾರ  ಸಂಕೀರ್ಣ ನಡೆಸಲಾಯಿತು. ಪ್ರಾದ್ಯಾಪಕರು, ವಿದ್ಯಾರ್ಥಿಗಳು ಮತ್ತು ಶುಶ್ರೂಷಕರು ವಿಚಾರ ಸಂಕೀರ್ಣದಲ್ಲಿ ಭಾಗವಸಿದ್ದರು. ಕೊನೆಗೆ ವಿದ್ಯಾರ್ಥಿಗಳು ಮತ್ತು ಶುಶ್ರೂಷಕರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News