ಕಡಂದಲೆ : ತೆಂಗಿನ ಮರದಿಂದ ಬಿದ್ದು ಕೃಷಿಕ ಮೃತ್ಯು
Update: 2018-05-17 19:53 IST
ಮೂಡುಬಿದಿರೆ, ಮೇ.17 : ತೆಂಗಿನಕಾಯಿ ಕೀಳಲು ಮರಕ್ಕೆ ಹತ್ತಿದ ಕೃಷಿಕರೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಕಡಂದಲೆಯಲ್ಲಿ ಗುರುವಾರ ನಡೆದಿದೆ.
ಕಡಂದಲೆ ಬಾರಂಗಳ ನಿವಾಸಿ ರಿಜಿನಾಲ್ಡ್ ಜರ್ಮನ್ ದಾಂತೀಸ್ (52) ಮೃತರು. ರಿಜಿನಾಲ್ಡ್ ಅವರು ಮನೆಯ ಸಮೀಪದ ಕೆ.ಬಿ.ವೆಂಕಟೇಶ್ ಭಟ್ ಎಂಬವರ ಮನೆಯಲ್ಲಿ ತೆಂಗಿನ ಕಾಯಿ ಕೀಳಲು ಮರಕ್ಕೆ ಹತ್ತಿದ್ದು ಈ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಸಹೋದರ ಜಿ.ಪಿ ದಾಂತೀಸ್ ಅವರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.