×
Ad

ಕ್ರಿಕೆಟ್ ಪಂದ್ಯಾಟ ಮುಂದೂಡಿಕೆ

Update: 2018-05-17 20:34 IST

ಉಡುಪಿ, ಮೇ 17:ಮಲ್ಪೆಯ ರಿಯಲ್‌ಫೈಟರ್ಸ್‌ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್‌ನ ಆಶ್ರಯದಲ್ಲಿ ಮೇ 18ರಿಂದ 20ರವರೆಗೆ ನಡೆಯಬೇಕಿದ್ದ ‘ರಿಯಲ್ ಫೈಟರ್ಸ್‌ ಟ್ರೋಫಿ’ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಮಳೆಯ ಕಾರಣ ಮುಂದಿನ ಡಿಸೆಂಬರ್ ಮೊದಲ ವಾರಕ್ಕೆ ಮುಂದೂಡಲಾಗಿದೆ ಎಂದು ಕ್ಲಬ್‌ನ ಉಪಾಧ್ಯಕ್ಷ ದಿನೇಶ್ ಶೆಟ್ಟಿಗಾರ್ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದ ಪಂದ್ಯಾಟಕ್ಕಾಗಿ ಸಿದ್ಧಗೊಳಿಸಿದ ಮೈದಾನ ಹಾಳಾಗಿದ್ದು, ಪಂದ್ಯಾಟ ಮುಂದೂಡಿಕೆ ಅನಿವಾರ್ಯವಾಗಿದೆ ಎಂದರು.

ಬೆಂಗಳೂರಿನ 9, ದಾವಣಗೆರೆಯ ಒಂದು ಹಾಗೂ ಉಡುಪಿಯ ಐದು ತಂಡಗಳು ಭಾಗವಹಿಸುವ ಈ ಪಂದ್ಯಾಟವನ್ನು ಚುನಾವಣಾ ನೀತಿ ಸಂಹಿತೆಯ ಕಾರಣಗಳಿಗಾಗಿ ಇದಕ್ಕೆ ಮೊದಲು ಮುಂದೂಡಲಾಗಿತ್ತು. ಪಂದ್ಯಾಟದ ವಿಜೇತ ತಂಡಕ್ಕೆ ಅತ್ಯಾಕರ್ಷಕ ಟ್ರೋಪಿ ಹಾಗೂ 2,22,222ರೂ.ನಗದು ಹಾಗೂ ರನ್ನರ್ ಅಪ್ ತಂಡಕ್ಕೆ ಟ್ರೋಫಿ ಹಾಗೂ 1,11,111ರೂ. ನಗದು ಬಹುಮಾನ ವಿರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ನ ಕ್ರೀಡಾ ಕಾರ್ಯದರ್ಶಿ ಫಯಾಜ್ ಹಾಗೂ ಕಾನೂನು ಸಲಹೆಗಾರ ಅಸದುಲ್ಲಾ ಕಟಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News