×
Ad

ಮಣಿಪಾಲ: ಜೈವಿಕ ಕ್ಷಯ ಪ್ರಯೋಗಾಲಯ ಉದ್ಘಾಟನೆ

Update: 2018-05-17 21:47 IST

ಉಡುಪಿ, ಮೇ 17: ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗವನ್ನು ಬಲಪಡಿಸುವ ಸಲುವಾಗಿ ಮೂರನೇ ಮಟ್ಟದ ಜೈವಿಕ ಕ್ಷಯ ಪ್ರಯೋಗಾಲಯವನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಉದ್ಘಾಟಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಹೆಯ ವೈಸ್ ಚಾನ್ಸಲರ್ ಡಾ.ಎಚ್.ವಿನೋದ್ ಭಟ್, ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಕೆಎಂಸಿಯ ಡೀನ್ ಡಾ.ಪ್ರಜ್ಞಾ ರಾವ್, ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೆಎಂಸಿಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ ಉಪಸ್ಥಿತರಿದ್ದರು.

ಬಿಎಸ್‌ಎಲ್ 3 ಅತ್ಯಾಧುನಿಕ ಪ್ರಯೋಗಾಲಯ ದಿನನಿತ್ಯದ ರೋಗ ನಿರ್ಣಯದ ಕೆಲಸ ಮತ್ತು ಔಷಧಿ ನಿರೋಧಕ ಕ್ಷಯವನ್ನು ನಕಾರಾತ್ಮಕ ಒತ್ತಡದ ಪರಿಸ್ಥಿತಿಗಳಲ್ಲಿ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಹಾಗೂ ಸೂಕ್ಷ್ಮದರ್ಶಕ, ಮೈಕ್ರೋಬ್ಯಾಕ್ಟೀರಿಯಲ್ ದ್ರವ ಸಂಸ್ಕೃತಿ, ಜೆನ್ ಪರೀಕ್ಷೆಗೆ ಇದು ಸಹಾಯಕ ವಾಗಲಿದೆ. ಇದರಿಂದ ಜಿಲ್ಲೆಯ ಮಾತ್ರವಲ್ಲದೇ ಹೊರ ಜಿಲ್ಲೆಗಳ ರೋಗಿಗಳಿಗೂ ಸಹಾಯಕವಾಗಲಿದೆ.

ಇಂಥ ಸೌಕರ್ಯವನ್ನು ಹೊಂದಿದ ಕರ್ನಾಟಕದ ಪ್ರಥಮ ಖಾಸಗಿ ವೈದ್ಯಕೀಯ ಕಾಲೇಜು ಇದಾಗಿದೆ. ಪ್ರಯೋಗಾಲಯದ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಕ್ಷಯರೋಗ ಅಧಿಕಾರಿ ಡಾ.ಚಿದಾನಂದ ಸಂಜು ಹಾಗೂ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಕ್ಷಯರೋಗ ತಜ್ಞರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News