ಸಿಮೆಂಟ್ ಕಂಪೆನಿಯ ಭಾರತೀಯ ಅಧಿಕಾರಿ ಇತಿಯೋಪಿಯದಲ್ಲಿ ಹತ್ಯೆ
Update: 2018-05-17 23:09 IST
ಅಡಿಸ್ ಅಬಾಬ (ಇತಿಯೋಪಿಯ), ಮೇ 17: ನೈಜೀರಿಯದಲ್ಲಿರುವ ಪ್ರಮುಖ ಸಿಮೆಂಟ್ ಕಂಪೆನಿಯೊಂದರ ಭಾರತೀಯ ಮ್ಯಾನೇಜರ್ ಸೇರಿದಂತೆ ಮೂವರನ್ನು ಇತಿಯೋಪಿಯದಲ್ಲಿ ಅಜ್ಞಾತ ಬಂದೂಕುಧಾರಿಗಳು ಗುಂಡಿಟ್ಟು ಕೊಂದಿದ್ದಾರೆ.
ನೈಜೀರಿಯದ ಡಾಂಗೋಟೆ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಡಾಂಗೋಟೆ ಸಿಮೆಂಟ್‌ನ ಮ್ಯಾನೇಜರ್ ದೀಪ್ ಕಾಮ್ರ ಬುಧವಾರ ಕಾರ್ಖಾನೆಯಿಂದ ಅಡಿಸ್ ಅಬಾಬಕ್ಕೆ ಹಿಂದಿರುಗುತ್ತಿದ್ದಾಗ ಸಂಘರ್ಷಪೀಡಿತ ಒರೊಮಿಯ ವಲಯದಲ್ಲಿ ದಾಳಿಗೆ ಒಳಗಾದರು ಎಂದು ‘ಪಿಎಂ ನ್ಯೂಸ್ ನೈಜೀರಿಯ’ ವರದಿ ಮಾಡಿದೆ.
ಕಾಮ್ರ ಅವರ ಇತಿಯೋಪಿಯನ್ ಕಾರ್ಯದರ್ಶಿ ಮತ್ತು ಇತಿಯೋಪಿಯನ್ ಚಾಲಕ ಕೂಡ ಆಕ್ರಮಣದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.