ಐಪಿಎಲ್ : ಬೆಂಗಳೂರಿಗೆ ಶರಣಾದ ಹೈದರಾಬಾದ್

Update: 2018-05-17 18:35 GMT

 ಬೆಂಗಳೂರು, ಮೇ 16: ನಾಯಕ ಕೇನ್ ವಿಲಿಯಮ್ಸನ್(81, 42 ಎಸೆತ, 7 ಬೌಂಡರಿ, 5 ಸಿಕ್ಸರ್)ಅರ್ಧಶತಕದ ಸಾಹಸದ ಹೊರತಾಗಿಯೂ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 14 ರನ್‌ಗಳಿಂದ ಸೋಲುಂಡಿದೆ.

ಇಲ್ಲಿ ಗುರುವಾರ ನಡೆದ 51ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 219 ರನ್ ಗುರಿ ಪಡೆದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು.
 ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್(18) ಹಾಗೂ ಹೇಲ್ಸ್(37)ಮೊದಲ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿದರು. ಧವನ್ ಹಾಗೂ ಹೇಲ್ಸ್ ಔಟಾದಾಗ ಜೊತೆಯಾದ ವಿಲಿಯಮ್ಸನ್ ಹಾಗೂ ಮನೀಶ್ ಪಾಂಡೆ (ಔಟಾಗದೆ 62, 38 ಎಸೆತ, 7 ಬೌಂಡರಿ, 2 ಸಿಕ್ಸರ್) 3ನೇ ವಿಕೆಟ್‌ಗೆ ಜೊತೆಯಾಟದಲ್ಲಿ 135 ರನ್ ಗಳಿಸಿ ತಂಡವನ್ನು ಆಧರಿಸಲು ಯತ್ನಿಸಿದರು.
ಬೆಂಗಳೂರು ಪರ ಚಹಾಲ್(1-28)ಸಿರಾಜ್(1-43) ಹಾಗೂ ಮೊಯಿನ್ ಅಲಿ(1-21) ತಲಾ ಒಂದು ವಿಕೆಟ್ ಪಡೆದರು.
ಬೆಂಗಳೂರು 218/6:ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಎಬಿಡಿ ವಿಲಿಯರ್ಸ್(69) ಹಾಗೂ ಮೊಯಿನ್ ಅಲಿ(65) ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್ ಪಂದ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದೆ.
  
ಆರ್‌ಸಿಬಿ ಮೊದಲ ಓವರ್‌ನಲ್ಲಿ ಪಾರ್ಥಿವ್ ಪಟೇಲ್(1) ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ನಾಯಕ ವಿರಾಟ್ ಕೊಹ್ಲಿ(12)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ತಂಡ 38 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಒಂದಾದ ಡಿವಿಲಿಯರ್ಸ್(69,39 ಎಸೆತ, 12 ಬೌಂಡರಿ, 1 ಸಿಕ್ಸರ್) ಹಾಗೂ ಮೊಯಿನ್ ಅಲಿ(65, 34 ಎಸೆತ, 2 ಬೌಂಡರಿ, 6 ಸಿಕ್ಸರ್)ಮೂರನೇ ವಿಕೆಟ್‌ಗೆ 107 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಆರನೇ ವಿಕೆಟ್‌ಗೆ ಗ್ರಾಂಡ್‌ಹೋಮ್(40) ಹಾಗೂ ಎಸ್‌ಎನ್‌ಖಾನ್(ಔಟಾಗದೆ 22)34 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 200ರ ಗಡಿ ದಾಟಿಸಿದರು.
ಸನ್‌ರೈಸರ್ಸ್ ಪರ ರಶೀದ್ ಖಾನ್(3-27) ಹಾಗೂ ಸಿದ್ದಾರ್ಥ್ ಕೌಲ್(2-44) ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್
ಆರ್‌ಸಿಬಿ: 20 ಓವರ್‌ಗಳಲ್ಲಿ 218/6

(ಎಬಿಡಿ ವಿಲಿಯರ್ಸ್ 69,ಮೊಯಿನ್ ಅಲಿ 65, ಗ್ರಾಂಡ್‌ಹೋಮ್ 40,ರಶೀದ್ ಖಾನ್ 3-27, ಕೌಲ್ 2-44)
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 204/3
(ವಿಲಿಯಮ್ಸನ್ 81, ಮನೀಶ್ ಪಾಂಡೆ ಔಟಾಗದೆ 62)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News