ಆರೋಗ್ಯವಂತ ಸಮಾಜ ಕಟ್ಟಲು ಶಿಕ್ಷಕರಿಂದ ಸಾಧ್ಯ: ಪ್ರೊ.ಹಿಲ್ಡಾ
ಉಡುಪಿ, ಮೇ 18: ಶಿಕ್ಷಕ ವೃತ್ತಿ ಕೇವಲ ಜೀವನಕ್ಕೊಂದು ಉದ್ಯೋಗವಾಗಿ ರದೆ ಸುದೃಢ ಸಮಾಜ ನಿರ್ಮಾಣದ ದೊಡ್ಡ ಹೊಣೆಗಾರಿಕೆ ಆಗಿದೆ. ಪ್ರಜ್ಞಾವಂತ ನಾಗರಿಕರೊಂದಿಗೆ ಆರೋಗ್ಯವಂತ ಸಮಾಜವನ್ನು ಕಟ್ಟಲು ಶಿಕ್ಷಕರಿಂದ ಸಾಧ್ಯ ಎಂದು ಪ್ರೊ.ಹಿಲ್ಡಾ ರೊಡ್ರಿಗಸ್ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಇತ್ತೀಚೆಗೆ ಶಿಕ್ಷಕರಿಗಾಗಿ ಆಯೋಜಿಸ ಲಾದ ಕೌಶಲ್ಯವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿ ದ್ದರು. ಹೊಸ ಹೊಸ ಕೌಶಲ್ಯಗಳನ್ನರಿತು ತರಗತಿಯಲ್ಲಿ ಪಠ್ಯದೊಂದಿಗೆ, ಸಾಮಾಜಿಕ ಕಾಳಜಿ, ನೈತಿಕ ಪ್ರಜ್ಞೆ, ಸ್ವಾಭಿಮಾನ, ಮಾನವೀಯ ವೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮಾನವ ಸಂಪನ್ಮೂಲ ತರಬೇತುದಾರ ನಿವೃತ್ತ ಪ್ರೊಫೆಸರ್ ಡಾ.ಕೃಷ್ಣಪ್ರಸಾದ್ ಹಾಗೂ ಡಾ.ಮನೋಜ್ ತರಬೇತಿ ನಡೆಸಿಕೊಟ್ಟರು. ಕಾಲೇಜಿನ ನ್ಯಾಕ್ ನಿರ್ದೇಶಕ ಡಾ.ಜಯರಾವ್ ಶೆಟ್ಟಿಗಾರ್ ಸ್ವಾಗತಿಸಿದರು. ರೇಶ್ಮಾ ಕಾರ್ಯಕ್ರಮ ನಿರೂಪಿಸಿ, ಚಂದ್ರಿಕ ವಂದಿಸಿದರು.