ಗಾಂಜಾ ಸಾಗಾಟ: ಆರೋಪಿ ಸೆರೆ
ಮಂಗಳೂರು, ಮೇ 18: 5 ಕೆ.ಜಿ. ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ವಶಕ್ಕೆ ಪಡೆದಿದೆ.
ಕಲಾಯಿ ನಿವಾಸಿ ತಸ್ಲೀಮ್ ಕಲಾಯಿ ಬಶೀರ್ ಎಂಬಾತನೇ ಚೀನೀ ಕಾಯಿ ಮೂಲಕ ಗಾಂಜಾ ಸಾಗಾಟಕ್ಕೆ ಯತ್ನಿಸಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಈತ ಶುಕ್ರವಾರ ಸಂಜೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೋಹಾಕ್ಕೆ ತೆರಳುವ ಪ್ರಯತ್ನದಲ್ಲಿದ್ದ ಎನ್ನಲಾಗಿದೆ. ಲಗೇಜು ತಪಾಸಣೆ ವೇಳೆ ಈತನ ಬಳಿ ಬೃಹದಾಕಾರದ ಮೂರು ಚೀನೀ ಕಾಯಿಯನ್ನು ಕಂಡು ಸಂಶಯಗೊಂಡ ಅಧಿಕಾರಿಗಳು ಅದನ್ನು ತಪಾಸಣೆಗೊಳಪಡಿಸಿದಾಗ ಗಾಂಜಾ ಇರುವುದು ಬೆಳಕಿಗೆ ಬಂದಿದೆ. ಈ ಕಾಯಿಯೊಳಗೆ 5ಕೆಜಿಯಷ್ಟು ಗಾಂಜಾವನ್ನು ತುಂಬಿಸಿಡಲಾಗಿತ್ತು. ಬಶೀರ್ ಸಂಜೆ 5.35ಕ್ಕೆ ದೋಹಾಗೆ ವಿಮಾನದಲ್ಲಿ ತೆರಳಬೇಕಿತ್ತು. ಅದಕ್ಕಾಗಿ 2 ಗಂಟೆ ಮೊದಲು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಅಧಿಕಾರಿಗಳು ಲಗೇಜು ಪರಿಶೀಲನೆ ಸಂದರ್ಭ ಚೀನಿ ಕಾಯಿ ಬಗ್ಗೆ ಬಶೀರ್‌ನನ್ನು ಸಮರ್ಪಕವಾಗಿ ಉತ್ತರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ತಪಾಸಣೆಗೊಳಪಡಿಸಿದ್ದಾರೆ. ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.